ಉಪ ಚುನಾವಣೆ: ಜೆಡಿಎಸ್ ಗೆ ಶೂನ್ಯ ಸಂಪಾದನೆ??

0
16

ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಒಂದೊಂದಾಗಿ ಹೊರ ಬರುತ್ತಿದ್ದು, ಸದ್ಯದ ಪ್ರಕಾರ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತಗೊಂಡಿದೆ.

ಈಗಾಗಲೇ ಬಿಜೆಪಿಯ ಬಿ.ಸಿ. ಪಾಟೀಲ್, ನಾರಾಯಣ ಗೌಡ, ಡಾ.ಕೆ. ಸುಧಾಕರ್, ಶಿವರಾಮ್ ಹೆಬ್ಬಾರ್ ಜಯ ಗಳಿಸಿದ್ದು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ. ಆರಂಭದಲ್ಲಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಜೆಡಿಎಸ್ ನಂತರ ಎರಡೂ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸಿದ್ದು ಶೂನ್ಯ ಸಂಪಾದನೆಯೇ ಬಹತೇಕ ಖಾತ್ರಿಯಾದಂತಿದೆ.
ಮೂರು ಕ್ಷೇತ್ರವನ್ನು ಉಳಿಕೊಳ್ಳುವಲ್ಲಿ ವಿಫಲವಾದಂತಿದೆ. ಎಲ್ಲಕ್ಕಿಂತ ಮೇಲಾಗಿ ಒಕ್ಕಲಿಗರ ಭದ್ರ ಕೋಟೆ ಮಂಡ್ಯದಲ್ಲಿ ಈ ಭಾರಿ ಕಮಲ ಕಿಲಕಿಲ ಎಂದು ಅರಳಿರುವುದು ಸಹ ವಿಶೇಷವಾಗಿದೆ .

loading...