ಕಾಗವಾಡ ಉಪ ಕದನದಲ್ಲಿ ಶ್ರೀಮಂತ ಪಾಟೀಲ ದಿಗ್ವಿಜಯ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆಗೆ ಕೈ ಕೊಟ್ಟ ಮತದಾರ: ಪ್ರವಾಹದ ನಾಡಲ್ಲಿ ಮತ್ತೆ ಅರಳಿದ ಕಮಲ

0
8

ಆನಂದ ಭಮ್ಮಣ್ಣವರ

ಚಿಕ್ಕೋಡಿ/ಕಾಗವಾಡ : ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ೧೫ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಸೋಮವಾರ ಹೊರ ಬಿದಿದ್ದೆ. ನಿರೀಕ್ಷೆಯಂತೆ ಬಿಜೆಪಿ ೧೫ ರಲ್ಲಿ ೧೨ ಸ್ಥಾನ ಗೆದ್ದು ಬಿಗಿದ್ದು,ಕಾಂಗ್ರೆಸ್ ಕೇವಲ ೨ ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ ೧ ಸ್ಥಾನ ಗಳಿಸಿಕೊಂಡಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯ ೩ ರಲ್ಲಿ ಕಮಲ ಅರಳಿಸಿ ಬಿಜೆಪಿ ನಾಯಕರು ಸ್ಥಿರ ಸರಕಾರಕ್ಕೆ ¨ಲ ನೀಡಿದ್ದಾರೆ . ಕಾಗವಾಡದದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ದಿಗ್ವಿಜಯ ಸಾಧಿಸಿ ಕ್ರಾಂತಿ ಮಾಡಿದ್ದಾರೆ .

 

ಕಾಗವಾಡ ರಣಕಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಗೆಲವು ಕಠಿಣ ಎಂದು ಹೇಳಲಾಗುತಿತ್ತು. ಆದರೆ ಕಾಗವಾಡ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸಿಎಂ ಯಡಿಯೂರಪ್ಪ ಕಾಗವಾಡ ಮತವೂಹವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಜಾತಿ ರಾಜಕಾರಣ ಸದ್ದು ಮಾಡುತ್ತಿತ್ತು. ಇದನ್ನು ಅರಿತ ಬಿಜೆಪಿ ನಾಯಕರು ಸ್ವತ ಸಿಎಂ ಯಡಿಯೂರಪ್ಪ ಮೂಲಕ ಲಿಂಗಾಯತ ಮತಗಳು ಬಿಜೆಪಿ ಬುಟ್ಟಿಗೆ ಬೀಳುವಂತೆ ತಂತ್ರ ರೂಪಿಸಿ ಯಶಸ್ವಿಯಾದರು . ಶ್ರೀಮಂತ ಪಾಟೀಲ ಕಾಂಗ್ರೆಸ್‌ದಿAದ ಆಯ್ಕೆಯಾಗಿ ೧೪ ತಿಂಗಳಿನಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಈ ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಕಮಲ ಅರಳಿಸಿದ್ದಾರೆ .

ಪ್ರವಾಹದ ಸಂಧರ್ಭದಲ್ಲಿ ಶ್ರೀಮಂತ ಪಾಟೀಲ ಸಂತ್ರಸ್ತರ ನೋವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಕ್ಷೇತ್ರದ ೧೧ ಗ್ರಾಮದ ಸಂತ್ರಸ್ತರು ಶ್ರೀಮಂತ ಪಾಟೀಲ ವಿರುದ್ದ ಅಸಮಾಧಗೊಂಡಿದ್ದರು. ಆದರೆ ಈ ಸಂತ್ರಸ್ತರ ಜೊತೆ ಸ್ವತ ಮುಖ್ಯಮಂತ್ರಿ ಸಂಧಾನ ನಡೆಸಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿದರೆ ಸರಕಾರ ನಮ್ಮದೆ ಇರುತ್ತದೆ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ್ದು, ಇದು ಕೂಡ ಶ್ರೀಮಂತ ಪಾಟೀಲ ವಿಜಯಕ್ಕೆ ಸಹಕಾರಿಯಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ರಾಜು ಕಾಗೆ ಸೋಲಿಗೆ ಕಾಂಗ್ರೆಸ್ ಪಕ್ಷದ ಒಳ ಬೆಗುದಿಯೇ ಕಾರಣವಾಗಿದೆ. ಕಾಗವಾಡ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೊರತು ಪಡೆಸಿ ಯಾವುದೇ ರಾಜ್ಯ ಮಟ್ಟದ ನಾಯಕರು ಪ್ರಚಾರಕ್ಕೆ ಬರಲಿಲ್ಲ, ಜಿಲ್ಲೆಯ ಕಾಂಗ್ರೆಸ ನಾಯಕರು ಕೂಡ್ ಕಾಗೆಗೆ ಸಾಥ್ ಕೊಡಲಿಲ್ಲ, ಜೊತೆಗೆ ಕಾಗೆಗೆ ಪ್ರಮುಖವಾಗಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯ ಮತಗಳು ಬಾರದೆಯಿರುವುದು ಕಾಗೆ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಕಾಗವಾಡದಲ್ಲಿ ಅದಲು-ಬದಲಾಗಿದ್ದ ಅಭ್ಯರ್ಥಿಗಳು :
ಕಾಗವಾಡ ಉಪ ಕದನದಲ್ಲಿ ರಾಜು ಕಾಗೆ ಮತ್ತು ಶ್ರೀಮಂತ ಪಾಟೀಲ ಕಳೆದ ಮೂರು ವಿಧಾನ ಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದಾರೆ . ೨೦೧೩,೨೦೧೮,೨೦೧೯ ವಿಧಾನ ಸಭೆ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದು , ಕಳೆದ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ರಾಜು ಕಾಗೆ ,ಕಾಂಗ್ರೆಸ್‌ನಿAದ ಸ್ಪರ್ಧೆ ಮಾಡಿದ್ದ ಶ್ರಿಮಂತ ಪಾಟೀಲ ವಿರುದ್ದ ೩೩ ಸಾವಿರ ಮತಗಳ ಅಂತರದಿAದ ಸೋಲು ಕಂಡಿದ್ದರು. ಆದರೆ ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳು ಅದಲು-ಬದಲಾದರು. ಬಿಜೆಪಿಗೆ ಬೈ ಹೇಳಿ ಕೈ ಹಿಡಿದಿದ್ದ ಕಾಗೆಗೆ ಮತದಾರ ಮಾತ್ರ ಕೈ ಕೊಟ್ಟಿದ್ದಾರೆ. ಕೈ ಬಿಟ್ಟ ಶ್ರೀಮಂತ ಪಾಟೀಲರಿಗೆ ಆಶಿರ್ವಾದ ಮಾಡಿದ್ದಾರೆ .

 

ಒಟ್ಟು ಮತದಾನ ಪ್ರತಿಶತ:೭೬:೨೭%
ಚಲಾವಣೆಯಾಗಿದ್ದ ಒಟ್ಟು ಮತಗಳು: ೧,೪೧,೯೪೬
ಪುರುಷರು:೭೪,೦೭೧
ಮಹಿಳೆಯರು: ೬೭,೮೭೪
ಇತರೆ: ೧

೧೮,೦೨೦ಮತಗಳ ಅಂತರದಿAದ
ಬಿಜೆಪಿ ಶ್ರೀಮಂತ ಪಾಟೀಲ ಗೆಲುವು.

ಶ್ರೀಮಂತ ಪಾಟೀಲ ಪಡೆದ ಒಟ್ಟು ಮತಗಳು: ೭೬,೫೫೭

ಪರಾಜಿತ ಕಾಂಗ್ರೆಸ್ ಅಬ್ಯರ್ಥಿ ರಾಜು ಕಾಗೆ ಪಡೆದ ಮತಗಳು:೫೮,೫೪೭

ಮತದಾರರ ವಿಶ್ವಾಸದಿಂದ ಶ್ರೀಮಂತ ಪಾಟೀಲ ಗೆಲುವಾಗಿದೆ:
ಬಹು ಅಂತರದಿAದ ಗೆಲುವು ಸಾಧಿಸಿದ್ದು ತುಂಬಾ ಸಂತೋಷವಾಗಿದೆ. ಮತಬಾಂಧವರಿಗೆ ದನ್ಯವಾಗಳು. ತಂದೆಯವರ ಗೆಲುವಿಗಾಗಿ ಸಿಎಂ, ಡಿಸಿಎಂ ಜಿಲ್ಲೆಯ ಶಾಸಕರು ಶ್ರಮಿಸಿದ್ದಾರೆ,
ಮತದಾರರ ವಿಶ್ವಾಸದಿಂದ ಶ್ರೀಮಂತ ಪಾಟೀಲ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಶ್ರಮವಿದೆ. ಕಾಗವಾಡ ಮಾದರಿ ಕ್ಷೇತ್ರವಾಗಿಸಲು ಸರಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗಾಗಿ ನಿಲ್ಲುತ್ತೆವೆ.

ಶ್ರೀನಿವಾಸ ಪಾಟೀಲ

loading...