ಅಥಣಿಯಲ್ಲಿ ಅನರ್ಹರನ್ನು ಅರ್ಹರನ್ನಾಗಿಸಿದ ಜನತಾ ಜನಾರ್ಧನ.. ‘ಅರಳಿದ’ ಕಮಲ ಬಾಗಿದ ‘ಕೈ’

0
17

ಕನ್ನಡಮ್ಮ ಸುದ್ದಿ-ಅಥಣಿ: ರಾಜ್ಯದಲ್ಲಿ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ನಮ್ಮ ಬಿಜೆಪಿ ೧೨ ಕ್ಷೇತ್ರಗಳಲ್ಲಿ ಭಾರಿ ಬಹುಮತಗಳ ಅಂತರದಿAದ ಜಯಭೇರಿ ಬಾರಿಸಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಈ ಚುನಾವಣೆಯಲ್ಲಿ ನನಗೆ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತಹ ಜವಾಬ್ದಾರಿಯನ್ನು ಪಕ್ಷ ನನಗೆ ನೀಡಿತ್ತು. ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವಲ್ಲಿ ಹಾಗೂ ಈ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿಕೊಂಡು ಬರುವಲ್ಲಿ ನನಗೆ ಸಹಕಾರ ನೀಡಿದ ಎಲ್ಲಾ ಮತ ಬಾಂಧವರಿಗೂ, ಬಿಜೆಪಿಯ ಎಲ್ಲಾ ಮುಖಂಡರಿಗೂ ಹಾಗೂ ನನ್ನ ಆತ್ಮೀಯ ಕಾರ್ಯಕರ್ತರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬೆಳಗಾವಿ ನಗರದ ನಿವಾಸದಲ್ಲಿ ಡಿಸಿಎಂ ಲಕ್ಷö್ಮಣ ಸವದಿ ಫಲಿತಾಂಶದ ಬಗ್ಗೆ ಪ್ರತಿಕ್ರೀಯೆ ನೀಡಿದರು.
ಇಡೀ ರಾಜ್ಯದಲ್ಲಿ ಬಿಜೆಪಿಯ ಪರ ಇರುವಂತಹ ಅಲೆ ಮತ್ತೊಮ್ಮೆ ಸಾಬೀತಾಗಿದೆ. ಮುಂದೆಯೂ ತಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಮಾರ್ಗದರ್ಶನಗಳೊಂದಿಗೆ ಉತ್ತಮ ಆಡಳಿತ ನೀಡುವುದಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ. ಗೆಲುವು ಸಾಧಿಸಿರುವ ಎಲ್ಲಾ ನಮ್ಮ ಬಿಜೆಪಿಯ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುವೆ ಎಂದು ಹೇಳಿದರು.

ವಾಮಮಾರ್ಗದಿಂದ ಬಿಜೆಪಿಯನ್ನು ಸೋಲಿಸಬೇಕೆಂಬ ವಿರೋಧಪಕ್ಷದವರ ಷಡ್ಯಂತ್ರಕ್ಕೆ ಜನತಾ ಜನಾರ್ಧನರು ತಕ್ಕ ಪಾಠ ಕಲಿಸಿದ್ದಾರೆ ಎಂಬುದು ಈ ಫಲಿತಾಂಶದಿAದ ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ ಕೇಂದ್ರ ಮತ್ತು ರಾಜ್ಯಗಳಲ್ಲಿ ಸ್ಥಿರ ಸರ್ಕಾರ ಮತ್ತು ಜನಪರ ಆಡಳಿತ ನೀಡುವುದಕ್ಕೆ ಸಮ್ಮತಿಸಿದ ಜನಮನ್ನಣೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ಅಥಣಿಯಲ್ಲಿ ವಿಜಯೋತ್ಸವ: ಅಥಣಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ೪೦ ಸಾವಿರ ಮತಗಳ ಅಂತದಿAದ ಗೆಲವು ಸಾಧಿಸುತ್ತಿದ್ದಂತೆ ಅಥಣಿ ಪಟ್ಟಣದ ಅವರ ನಿವಾಸಲ್ಲಿ ಸಹೋದರ ಡಾ. ಪ್ರಕಾಶ ಕುಮಟಳ್ಳಿ ಅವರನ್ನು ಜನರು ಅಭಿನಂದನೆ ಸಲ್ಲಿಸಿದರು. ಅಲ್ಲದೆ ಗುಲಾಲ್ ಎರಚುವದರ ಮೂಲಕ, ಹಾಗೂ ಪಟಾಕಿ ಸಿಡಿಸುವದರ ಮೂಲಕ ಭರ್ಜರಿ ವಿಜಯೋತ್ಸವವನ್ನು ಆಚರಿಸಿದರು.
ಕುಟುಂಬದಲ್ಲಿ ಗೆಲುವಿನ ಉತ್ಸಹ: ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಭಾರಿ ಮತಗಳ ಅಂತರದಿAದ ಗೆಲವು ಸಾಧಿಸುತ್ತಿದ್ದ ಹಾಗೆ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು ಸಿಹಿ ಹಂಚಿ ವಿಜಯೋತ್ಸವವನ್ನು ಸಂಭ್ರಮಿಸಿದರು. ಮಹೇಶ ಕುಮಟಳ್ಳಿ ಅವರ ತಾಯಿ, ಪತ್ನಿ, ಸಹೋದರ, ಮಗ, ಮಗಳು ಸೇರಿ ಇಡಿ ಕುಟುಂಬದ ಎಲ್ಲರು ಸೇರಿ ಸಂಭ್ರಮಾಚರಣೆ ಮಾಡಿದರು. ಅಲ್ಲದೆ ಮನೆ ದೇವರಿಗೆ ಹಾರ ಹಾಕುವ ಮೂಲಕ ಪತ್ನಿ ಅವರು ವಿಶೇಷ ಪೂಜೆ ನಡೆಸಿದರು.

loading...