ಯಡಿಯೂರಪ್ಪ ಭೇಟಿ ಮಾಡಿದ ಸಚಿವ ಸ್ಥಾನದ ಆಕಾಂಕ್ಷಿ ಉಮೇಶ್ ಕತ್ತಿ

0
15

ಬೆಂಗಳೂರು: ಎಂಟಿಬಿ ಭೇಟಿ ಮಾಡಿ ಹೋಗುತ್ತಿದ್ದಂತೆಯೇ ಸಚಿವಕಾಂಕ್ಷಿಗಳಾಗಿರುವ ರಾಮದಾಸ್ ಹಾಗೂ ಉಮೇಶ್ ಕತ್ತಿ ಯಡಿಯೂರಪ್ಪ ಅವರನ್ನುಡಾರ‍್ಸ್ ಕಾಲೋನಿ ನಿವಾಸದಲ್ಲಿ ಭೇಟಿಯಾದರು.
ಮೊದಲ ಬಾರಿಗೆ ಸಂಪುಟ ರಚನೆಯಲ್ಲಿ ಸಚಿವ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದ ರಾಮದಾಸ್ ಹಾಗೂ ಉಮೇಶ್ ಕತ್ತಿಗೆ ಯಡಿಯೂರಪ್ಪ‌ ನಿರಾಸೆಯುಂಟು ಮಾಡಿದ್ದರು. ಆ ಬಳಿಕ ಪಕ್ಷದ ವಿರುದ್ಧ ಉಮೇಶ್ ಕತ್ತಿ‌ ಸಿಡಿದೆದ್ದಿದ್ದರಾದರೂ ಮುಂದಿನ ದಿನಗಳಲ್ಲಿ ಅವರ ಆಸೆ ಈಡೇರಿಸುವುದಾಗಿ ಹೇಳಿ ಕತ್ತಿ ಜೊತೆಗೆ ರಾಮದಾಸ್ ಅವರನ್ನು ಸಮಾಧಾನಗೊಳಿಸಲಾಗಿತ್ತು. ಆದರೀಗ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲರಿಗೂ ಮಂತ್ರಿ ಭಾಗ್ಯ ನೀಡುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳಾಗಿದ್ದವರ ಕಣ್ಣು ಕೆಂಪಗಾಗಿದೆ. ಹೀಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಸಚಿವಾಕಾಂಕ್ಷಿಗಳು‌ ಮತ್ತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ.
ಪುನಃ ಮಂತ್ರಿಗಿರಿಗಾಗಿ ಬೇಡಿಕೆಯಿಟ್ಟಿರುವ ರಾಮದಾಸ್ ಹಾಗೂ ಉಮೇಶ್ ಕತ್ತಿಗೆ ಪರಿಸ್ಥಿತಿ ನೋಡಿಕೊಂಡು ತರ‍್ಮಾನ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಯಡಿಯೂರಪ್ಪ ಧವಳಗಿರಿ ನಿವಾಸಕ್ಕೆ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಭೇಟಿ ನೀಡಿ,‌ ತಮ್ಮ ಗೆಲುವಿಗೆ ಸಹಕರಿಸಿದ ಯಡಿಯೂರಪ್ಪ ಹಾಗೂ ಉಸ್ತುವಾರಿ ವಿಜಯೇಂದ್ರ ಅವರಿಗೆ ಧನ್ಯವಾದಗಳನ್ನು ರ‍್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ತಮ್ಮ ವಿರುದ್ಧ ಜೆಡಿಎಸ್ ದೊಡ್ಡ ದೊಡ್ಡ ಅಪವಾದ ಮಾಡಿದ್ದರೂ ಆ ಎಲ್ಲ ಅಪವಾದಗಳಿಂದ ತಾವು ಪಾಸಾಗಿ ಬಂದಿದ್ದು ಯುದ್ಧ ಮುಗಿದಿದೆ ಎಂದರು.
ಯಾರು ಯಾರಿಗೆ ಟೋಪಿ ಹಾಕಿದರು ಎಂಬುದು ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ನಾರಾಯಣಗೌಡ ತಿವಿದರು.
ಮುಖ್ಯಮಂತ್ರಿಗಳು ಯಾವುದೇ ಸಚಿವ ಸ್ಥಾನ ಕೊಟ್ಟರೂ ಒಪ್ಪಿಕೊಳ್ಳುವುದಾಗಿ ಹೇಳಿದ ನಾರಾಯಣಗೌಡ, ತಮಗೆ ಇಂತಹದ್ದೇ ಖಾತೆ ಬೇಕು ಎಂದು ಕೇಳುವುದಿಲ್ಲ ಎಂದರು.
ಕಳೆದ ಹದಿನೈದು ರ‍್ಷಗಳಿಂದ ನಾನು ಅವರಿಗೆ ಟೋಪಿ ಹಾಕಿರಲಿಲ್ಲ. ಅವರ ಕುಟುಂಬದವರಿಗೆ ಟೋಪಿ ಹಾಕಿರಿಲಲ್ಲವೇ ? ಈಗ ಬಿಜೆಪಿ ಸೇರಿದ ನಂತರ ಟೋಪಿ ಹಾಕಿದ್ದೇನಾ ? ಎಂದು ವ್ಯಂಗ್ಯವಾಡಿದ ನಾರಾಯಣ ಗೌಡ, ಕೆ.ಆರ್.ಪೇಟೆ ಜನ ತರ‍್ಪು ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ತಮ್ಮ ಮೇಲೆ ಯುದ್ಧ ಸಾರಿದ್ದರು. ಈಗ ಸೋತ ಮೇಲೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕುಟುಕಿದರು.

loading...