ಸಂಸ್ಕಾರ ಮರೆಯಾಗುತ್ತಿದೆ: ಶಿವಕುಮಾರ ಶ್ರೀ ಕಳವಳ

0
8

ನರಗುಂದ: ಹಿಂದೂಗಳ ಪುರಾಣ, ಮುಸ್ಲಿಮರ ಕುರಾನ, ಕ್ರಿಶ್ಚಿಯನ್ನರ ಬೈಬಲ್ ಇತರ ಎಲ್ಲ ಧರ್ಮಗಳ ಸಾರ ಒಂದೇ ಆಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲ ಧರ್ಮದ ಜನಾಂಗದವರಲ್ಲಿ ಸಂಸ್ಕಾರ ಎಂಬುವುದು ಮರೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಸುಕ್ಷೇತ್ರ ವಿರಕ್ತಮಠದ ಶಿವಕುಮಾರ ಶ್ರೀಗಳು ಹೇಳಿದರು.
ಪಟ್ಟಣದ ಅರ್ಭಾಣ ಬಡಾವಣೆಯ ಹಜರತ್ ಮೆಹಬೂಬ ಸುಭಾನಿ ದರ್ಗಾದ ಉರುಸು ಪ್ರಯುಕ್ತ
ಜಗತ್ತಿನಲ್ಲಿರುವ ಅನೇಕ ಮುಸ್ಲಿಂ ಜನಾಂಗದವರು ಹಿಂದೂಗಳ ಮಠ, ಮಾನ್ಯಗಳಿಗೆ ಇಂದಿಗೂ ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುವುದನ್ನು ನಾವೆಲ್ಲ ಕಾಣುತ್ತೇವೆ. ಅದರಂತೆ ಹಿಂದೂಗಳು ಸಹ ಮುಸ್ಲಿಮರ ವಿವಿಧ ದರ್ಗಾಗಳಿ ನಡೆದುಕೊಳ್ಳುವ ಮೂಲಕ ಸೌಹಾರ್ಧತೆಯನ್ನು ಮೆರೆಯುತ್ತಿದ್ದಾರೆ. ಆದರೆ, ಇಂದಿನ ಕಾಲದ ಯುವಕರಲ್ಲಿ ಸಂಸ್ಕಾರ, ನಂಬಿಕೆ, ಭಯ, ಭಕ್ತಿ ಎಂಬುವುದು ಮಾಯವಾಗಿ ಹೋಗಿದೆ. ಯುವಕರು ಯಾವುದೇ ಜಾತಿ, ಮತ, ಪಂಗಡ ಹಾಗೂ ಆಚಾರ, ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಸಮಾಜದಲ್ಲಿ ಇರುವಷ್ಟು ಕಾಲ ಉತ್ತಮ ಮನುಷ್ಯನಾಗಿ ಒಳ್ಳೆಯ ಸಂಸ್ಕಾರದಿAದ ಎಲ್ಲರೊಂದಿಗೆ ಸಹಭಾಳ್ವೆಯ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.
ಭೈರನಹಟ್ಟಿ ಶಾಂತಲಿAಗ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿರದ ವಿವಿಧ ಜಾತಿ, ಭಾಷೆ, ಆಚಾರ-ವಿಚಾರಗಳು ನಮ್ಮ ದೇಶದಲ್ಲಿವೆ. ಹೀಗಾಗಿ ಭಾರತ ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟçವಾಗಿದೆ. ಸಮಾಜದಲ್ಲಿನ ಗಾಳಿ, ನೀರು, ಬೆಳಕು, ಆಹಾರ ಎಲ್ಲರಿಗೂ ಹೇಗೆ ಒಂದೇ ಆಗಿವೆಯೋ ಅದರಂತೆ ಎಲ್ಲ ಜನಾಂಗದ ಮನುಷ್ಯರು ಕೂಡ ಭಾವೈಕ್ಯತೆಯಿಂದ ಕೂಡಿ ಬಾಳುವುದನ್ನು ಕಲಿತುಕೊಳ್ಳಬೇಕು. ದ್ವೇಷವನ್ನು ಬಿಡಬೇಕು. ಎಲ್ಲ ಧರ್ಮಗಳ ಸಾಧು ಸಂತರು, ಮಹಾನ್ ಶಿವ ಶರಣರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮನುಷ್ಯತ್ವದಿಂದ ಬದುಕುವುದನ್ನು ಕಲಿಯಬೇಕಿದೆ. ಭಾರತವನ್ನು ಒಂದು ಆದರ್ಶ ದೇಶವನ್ನಾಗಿ ನಿರ್ಮಿಸುವ ಗುರುತರ ಜವಾಬ್ದಾರಿ ನಮ್ಮ ಇಂದಿನ ಕಾಲದ ಯುವಕರ ಮೇಲಿದೆ. ವೃದ್ದಾಶ್ರಮದ ಸಂಸ್ಕೃತಿ ದೇಶಕ್ಕೆ ಮಾರಕ. ಹೀಗಾಗಿ ಮಕ್ಕಳು ತಮ್ಮ ತಂದೆ, ತಾಯಿಗಳನ್ನು ಅತ್ಯಂತ ಪ್ರೀತಿ, ಗೌರವದಿಂದ ಕಾಣುವಂತಾಗಬೇಕು ಎಂದು ತಿಳಿಸಿದರು.
ಗುಡ್ಡದ ಹಿರೇಮಠದ ಸಿದ್ದಲಿಂಗ ಶ್ರೀಗಳು, ಮುಸ್ಲಿಂ ಧರ್ಮಗುರು ಅಕ್ಬರಬೇಗ್ ಮುಲ್ಲಾ, ಜನಾಬ ಬಾಬುಸಾಹೇಬ ಅಜ್ಜನವರು ಮಾತನಾಡಿದರು. ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ವಿವಿಧ ಗಣ್ಯಮಾನ್ಯರನ್ನು ಸತ್ಕರಿಸಲಾಯಿತು. ನಂತರ ಪುಟ್ಟರಾಜ ಮೆಲೋಡಿಸ್ ಕಲಾ ತಂಡದವರಿAದ ವಿವಿಧ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು. ಪುರಸಭೆ ಸದಸ್ಯ ಮಹೇಶ ಬೋಳಶೆಟ್ಟಿ, ಆದಮ್‌ಸಾಬ ಸಕಲಿ, ಗೌಸ್ ನಧಾಪ, ಶಿವಪ್ಪ ಬೋಳಶೆಟ್ಟಿ, ಹುಸೇನಸಾಬ ನಾಯ್ಕರ, ಕಾಶೀಮಸಾಬ ಜಮಾದಾರ, ಮಹಮ್ಮದ ನಾಯ್ಕರ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುರಕೋಡ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ಎ.ಫನಿಬAಧ ನಿರ್ವಹಿಸಿದರು.

loading...