ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ತರಬೇತಿಗಳು ಅವಶ್ಯ: ಗೋಣೆಣ್ಣವರ

0
3

ಶಿರಹಟ್ಟಿ: ಸಮಾಜದಲ್ಲಿ ದೃಷ್ಠಿಯಲ್ಲಿ ಎಲ್ಲರೂ ಸಮಾನರು, ಮೇಲು ಕೀಳು ಎನ್ನುವ ಬೇಧಭಾವವಿಲ್ಲ, ಆದಕಾರಣ ವಿಕಲಚೇತನರನ್ನು ಸಬಲೀಕರಣಗೊಳಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ವಿಶೇಷಚೇತನರು ಅವುಗಳ ಸದುಪಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಶಿರಹಟ್ಟಿ ತಾಲೂಕ ದಂಡಾಧಿಕಾರಿ ಯಲ್ಲಪ್ಪ ಗೋಣೆಣ್ಣವರ ಕರೆ ನೀಡಿದರು.
ಅವರು ಪಟ್ಟಣದ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ದೀನಬಂಧು ಸಂಸ್ಥೆ, ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗಿ ವಿಕಲಚೇತರಿಗಾಗಿ ೪೫ದಿನಗಳ ಕಾಲ ಜರುಗುತ್ತಿರುವ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಗಾಟಿಸಿ ಮಾತನಾಡುತ್ತಾ,
ಪ್ರಸ್ತುತವಾಗಿ ಉತ್ತರ ಕರ್ನಾಟಕದ ನಿರುದ್ಯೋಗಿ ವಿಕಲಚೇತನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ತರಬೇತಿ ಪಡೆದು ಅಲ್ಲಿಯೇ ಉದ್ಯೋಗ ಮಾಡಬೇಕಾದ ಪರಿಸ್ಥಿತಿ ಒದಗಿತ್ತು. ಎಷ್ಟೋ ವಿಕಲಚೇತರನರು ಅಲ್ಲಿಯ ಊಟ, ಹವಾಮಾನ, ವಾಹನ ದಟ್ಟಣೆ ಇತ್ಯಾದಿಗಳಿಗೆ ಹೊಂದಿಕೊಳ್ಳದೇ ವಾಪಸ್ಸಾಗಿ ಬಂದು ಮತ್ತೇ ಇಲ್ಲಿ ಕೆಲಸ ಸಿಗದೇ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸಬೇಕಿತ್ತು. ಆದರೆ ಅಂಥಹ ಪರಿಸ್ಥಿತಿಯನ್ನು ಅರಿತು ಆಸರೆ ಅಂಗವಿಕಲರ ಸಂಸ್ಥೆಯು ಶಿರಹಟ್ಟಿಯಲ್ಲಿ ಪ್ರಥಮ ಪ್ರಯೋಗವಾಗಿ ಜಿಲ್ಲೆಯಲ್ಲಿನ ವಿಕಲಚೇತನರಿಗೆ ಸ್ಥಳೀಯವಾಗಿಯೇ ಉಚಿತ ೪೫ ದಿನಗಳ ವಸತಿಯುತ ತರಬೇತಿ ನೀಡಿ ಸ್ಥಳೀಯ ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶಗಳನ್ನು ಹುಡುಕಿ ಅವರನ್ನು ಉದ್ಯೋಗಿಗಳನ್ನಾಗಿಸುತ್ತಿರುವದನ್ನು ನೋಡಿ ನಿಜವಾಗಿಯೂ ಇದೊಂದು ಅದ್ಭುತ ಪ್ರಯತ್ನವಾಗಿದ್ದು, ಇದರ ಸದುಪಯೋಗ ಪಡೆದು ನಿರುದ್ಯೋಗಿ ವಿಕಲಚೇನರು ಸ್ವಾವಲಂಬಿಗಳಾಗಲು ಶುಭ ಕೋರಿದರು.
ನಂತರ ಆಸರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಶಿರಸಂಗಿ ಸಂಸ್ಥೆಯು ನಡೆದುಬಂದ ಪ್ರಗತಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ನಂತರ ದೀನಬಂಧು ಸಂಸ್ಥೆಯ ಮುಖ್ಯಸ್ಥರಾದ ವಿಜಯ್ ಮಳೇಕರ್ ಅವರು ಮಾತನಾಡುತ್ತಾ, ಅಂಗವಿಕಲತೆ ಶಾಪವಲ್ಲ, ಅದೊಂದು ನಿಮಗೆ ವಿಶೇಷವಾಗಿ ದೇವರು ಕೊಟ್ಟ ವರವಾಗಿದೆ, ಸಮಾಜದಲ್ಲಿ ಏನನ್ನಾದರೂ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿ ಹೊಸ ಹೊಸ ಯೋಜನೆಗಳ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರಲೆಂದು ನಿಮಗೆ ದೇವರು ಈ ವರವನ್ನು ದಯಪಾಲಿಸಿದ್ದಾನೆ ದಯವಿಟ್ಟು ನಿಮ್ಮ ವಿಕಲತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಸಮಾಜದಲ್ಲಿ ನಾವೂ ಕೂಡ ನಿಮ್ಮಂತೆಯೇ ಇದ್ದು, ನಿಮಗಿಂತ ವಿಭಿನ್ನವಾಗಿ ಸಾಧನೆ ಮಾಡಬಲ್ಲೆವು ಎಂದು ವಿಕಲಚೇತನರಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ವಿವಿದೋದ್ಧೇಶ ಕಾರ್ಯಕರ್ತೆ ಭಾರತಿ ಮೂರಶಿಳ್ಳಿನ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಜಯಪ್ಪ ಲಮಾಣಿ, ನಾಮದೇವ ಲಮಾಣಿ, ರೇಖಾ ಕೊಡ್ಲಿ, ಸುಮಾ ಬೆಟಗೇರಿ, ನಿಂಗಪ್ಪ ಹುಳ್ಳಿ, ಜಯಶ್ರೀ ಮಠಪತಿ, ಈಶÀ್ವರ ಲಮಾಣಿ, ಲಕ್ಷö್ಮವ್ವ ಕರಿನಿಂಗಣ್ಣವರ, ಕೃಷ್ಣಪ್ಪ ಲಮಾಣಿ, ಪ್ರವೀಣ ಭಜಂತ್ರಿ, ಪ್ರಕಾಶ ಹೊಸಮನಿ ಹಾಗೂ ವಿಕಲಚೇತನರಾದ ಪ್ರವೀಣ ಮೂರಶಿಳ್ಳಿ, ಗೋಪಿ ಲಮಾಣಿ, ಸುಮಂಗಲಾ ಪಾಟೀಲ, ದೇವಪ್ಪ ಕಟ್ಟೇಕಾರ ಹಾಗೂ ಸಂಸ್ಥೆಯ ಶಿಕ್ಷಕಿ ಸುಜಾತಾ ದೊಡ್ಡೂರ, ಶಿಕ್ಷಕ ಹಸನಸಾಬ ಕಿಲ್ಲೇದಾರ, ಹಿತೈಸಿಗಳಾದ ಪ್ರಕಾಶ ಮೇಟಿ, ಪ್ರದೀಪ ಗೊಡಚಪ್ಪನವರ, ಸಿದ್ದಪ್ಪ ಹೂಗಾರ ಇನ್ನೂ ಅನೇಕರು ಉಪಸ್ಥಿತರಿದ್ದರು.

loading...