ಉತ್ತರ ಕೊರಿಯಾದ ಪುನವರ್ಸತಿ ಕಾರ್ಯಾಚರಣೆಗೆ 87 ದಶಲಕ್ಷ ಡಾಲರ್ ಅಗತ್ಯ : ವಿಶ್ವಸಂಸ್ಥೆ

0
3

ವಿಶ್ವಸಂಸ್ಥೆ: ಉತ್ತರ ಕೊರಿಯಾದ ಜೀವ ರಕ್ಷಣ ಕಾರ್ಯಾಚರಣೆಯಲ್ಲಿ ಈ ವರ್ಷದ ಅಗತ್ಯಗಳಿಗಾಗಿ 87 ದಶಲಕ್ಷ ಡಾಲರ್ ಅಗತ್ಯವಿದ್ದು ಎಲ್ಲಾ ಸದಸ್ಯ ರಾಷ್ಟ್ರಗಳು ಉದಾರವಾಗಿ ದೇಣಿಗೆ ನೀಡುವಂತೆ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮಾನವೀಯ ಕಾರ್ಯಗಳಿಗಾಗಿ ಜೀವರಕ್ಷಣ ನಿಧಿಗೆ ಎಲ್ಲ ಸದಸ್ಯ ರಾಷ್ಟ್ರಗಳು ಕೊಡುಗೆ ನೀಡುವಂತೆ ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್ ವಲಯದ ಸಹಾಯಕ ಪ್ರಧಾನ ಕಾರ್ಯದರ್ಶಿ ಮೊಹಮದ್ ಖಲೀದ್ ಖಿಯಾರಿ ಕೋರಿದ್ದಾರೆ.
2019 ರಲ್ಲಿ ಉತ್ತರ ಕೊರಿಯಾದಲ್ಲಿ ತೀವ್ರ ತೊಂದರೆಗೊಳಗಾಗಿರುವ 38 ಲಕ್ಷ ಜನರ ಮಾನವೀಯ ಅಗತ್ಯಗಳ ಈಡೇರಿಕೆಗೆ 120 ದಶಲಕ್ಷ ಡಾಲರ್ ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು ಇದಕ್ಕೆ 87 ದಶಲಕ್ಷ ಡಾಲರ್ ಕೊರತೆ ಇದೆ ಎಂದು ಅವರು ವಿವರಿಸಿದರು.
ಉತ್ತರ ಕೊರಿಯಾದ ನಾಗರಿಕರಿಗೆ ವೈದ್ಯಕೀಯ ಸೇವೆ ದೊರೆಯುವಂತಾಗಲು ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯು ಎಚ್ ಒ) ಮೂಲಕ ಪ್ಯೋನ್ ಗ್ಯಾನ್ ಗೆ 5 ದಶಲಕ್ಷ ಡಾಲರ್ ನೆರವು ನೀಡುವುದಾಗಿ ಕಳೆದ ವಾರವಷ್ಟೇ ದಕ್ಷಿಣ ಕೊರಿಯಾ ಘೋಷಿಸಿತ್ತು.

loading...