ಕೀಟ ಬಾಧೆ ನಿವಾರಣೆ: ರೈತರಿಗೆ ಸಲಹೆ

0
16

ನರಗುಂದ: ತಾಲೂಕಿನ ವಿವಿಧ ಗ್ರಾಮಗಳ ರೈತರ ಕಡಲೆ ಬೆಳೆಗಳಲ್ಲಿ ಹಸಿರು ಕಾಯಿಕೊರಕ ಕೀಟರೋಗ ಬಾಧೆ ಕಂಡು ಬಂದ ಹಿನ್ನೆಲೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಮತ್ತು ಕೃಷಿ ವಿಜ್ಞಾನಿ, ಕೀಟ ತಜ್ಞ ಡಾ. ಸಿ.ಎಂ.ರಫಿ ಭೈರನಹಟ್ಟಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಕೀಟಬಾಧೆ ನಿಯಂತ್ರಿಸುವ ವಿವಿಧ ಮುಂಜಾಗ್ರತಾ ಕ್ರಮಗಳ ಬಗ್ಗೆ ರೈತರಿಗೆ ಸಲಹೆಯನ್ನು ನೀಡಿದರು.
ಕಡಲೆ ಬೆಳೆಗೆ ಹಸಿರು ಕಾಯಿಕೊರಕ ಹುಳುವಿನ ಬಾಧೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಕುಂಕುಮ ರೋಗ ಹರಡುವ ಸಾಧ್ಯತೆಗಳಿದ್ದು, ರೈತರು ಕೀಟಗಳ ನಿಯಂತ್ರಣಕ್ಕೆ ಪ್ರತಿ ಟ್ಯಾಂಕಿಗೆ ೫ ಗ್ರಾಮ ಇಮಾಮೆಕ್ಟಿನ್ ಬೆಂಜೋಯೇಟ್ ಮತ್ತು ೧೫ ಮೀ.ಲೀ ಹೆಕ್ಸಾಕೊನಜೋಲ್ ಬೆರೆಸಿ ಬೆಳೆಗಳಿಗೆ ಸಿಂಪರಣೆ ಮಾಡಬೇಕು.
ಗೋಧಿ ಬೆಳೆಗಳಿಗೆ ಕಾಂಡ ಕೊರಕ, ಭಂಡಾರ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ೦.೩ ಮಿ.ಲೀ ಕೊರಾಜಿನ್, ೧ ಮಿ.ಲೀ ಹೆಕ್ಸಾಕೊನಜೋಲ್ ಅಥವಾ ಪ್ರೊಪಿಕೊನಜೋಲ್ ಹಾಕಿ ಸಿಂಪರಿಸಬೇಕು. ಜೋಳದಲ್ಲಿ ಲದ್ದಿಹುಳು ಕಂಡು ಬಂದಲ್ಲಿ ಒಂದು ಲೀಟರ್ ನೀರಿಗೆ ೦.೪ ಗ್ರಾಮ ಇಮಾಮೆಕ್ಟಿನ್ ಬೆಂಜೋಯಿಟ್ ಬಳಸಬೇಕು. ಶೇ.೫ ಕ್ಕಿಂತ ಕಡಿಮೆ ಕಾಂಡ ಕೊರಕ ಇದ್ದಲ್ಲಿ ಔಷಧಿಯ ಅವಶ್ಯಕತೆ ಇರುವುದಿಲ್ಲ. ಸೂರ್ಯಕಾಂತಿ ಬೆಳೆಗಳಿಗೆ ೧ ಗ್ರಾಂ ಎಸಿಫೇಟ್ ೧ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವಂತೆ ರೈತರಿಗೆ ಸಲಹೆಯನ್ನು ನೀಡಿದರು.

loading...