ರೈಲ್ವೆ ಹಳಿಯಲ್ಲಿ ನಾಲ್ವರ ಶವ ಪತ್ತೆ :  ಆತ್ಮಹತ್ಯೆ ಶಂಕೆ

0
24

ದಿಂಡಿಗಲ್:-  ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈ ರಸ್ತೆ ರೈಲ್ವೆ ಹಳಿಯ ಬಳಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
ಮೃತರನ್ನು ತಿರುಚಿರಾಪಳ್ಳಿ ನಗರದ ವೊರೈಯೂರ್ ಪ್ರದೇಶದ ಉತಿರಪತಿ (೪೯), ಸಂಗೀತ (೪೦), ಅಭಿನಯ ಶ್ರೀ (೧೫) ಮತ್ತು ಆಕಾಶ್ (೧೨) ಎಂದು ಗುರುತಿಸಲಾಗಿದೆ.
ರೈಲ್ವೆ ಹಳಿಗಳ ಸುತ್ತಲೂ ಹರಡಿರುವ ವಿಕೃತ ದೇಹಗಳನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೈಲ್ವೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿಂಡಿಗಲ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕುಟುಂಬದ ನಾಲ್ವರು ಸದಸ್ಯರು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.  ಆದರೆ ಆತ್ಮಹತ್ಯೆಗೆ ಸಂಬಂಧಿಸಿ ಯಾವುದೇ ಪತ್ರ ಕಂಡುಬಂದಿಲ್ಲ. ವಿವರವಾದ ತನಿಖೆಯ ನಂತರವೇ ಸಾವಿನ ಹಿಂದಿನ ನಿಖರ ಕಾರಣ ಲಭ್ಯವಾಗಲಿದೆ.

loading...