ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳಿಂದ ಆಯುಕ್ತರಿಗೆ ಮನವಿ

0
25

ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು ಅತ್ಯಾಚಾರಿಗೆ ಗಲ್ಲು ಶಿಕ್ಷೆ ಗುರಿಯಾಗುಸಲು ವಿವಿಧ ಒಕ್ಕೂಟಗಳು ಸೇರಿ ಪೊಲೀಸ್ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಿದರು.
ಅಂತರರಾಜ್ಯ ಜನನಾಯಕ ಕರ್ಪೂರಿ ಠಾಕೂರ ಸಮುದಾಯಗಳ ಒಕ್ಕೂಟ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಜತೆಗೂಡಿ ಆಯುಕ್ತರ ಕಚೇರಿ‌ ಆವರಣದಲ್ಲಿ ಪ್ರತಿಭಟನಾಕಾರರು
ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ ಹೇರಿದರು.

 

7 ವರ್ಷದ ಮುಗ್ಧ ಬಾಲಕಿಯ ಮೇಲೆ ಸುನೀಲ ಬಾಳಾನಾಯಕ ಎಂಬುವವನು ಅತ್ಯಾಚಾರ ನಡೆಸಿದ್ದು ಸಮಾಜವೇ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಆಂದ್ರ ಪ್ರದೇಶದ ದಿಶಾ ಅತ್ಯಾಚಾರದ ಅರೋಪಿಗಳಿಗೆ ಆದ ಶಿಕ್ಷೆಯನ್ನು ಪರಿಗಣನೆಗೆ ತೆಗೆದುಕೊಂಡು ಈ ಪ್ರಕರಣವನ್ನು 50 ದಿನದ ಒಳಗಾಗಿ ಇತ್ಯರ್ಥಗೊಳಿಸಿ ಆತನನ್ನು ಕೂಡಲೇ ಗಲ್ಲಿಗೇರಿಸಬೇಕು ಹಾಗೂ ಇಂತಹ ಘಟನೆಗಳು ನಡೆದಾಗ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಹೀನಾಯ ಘಟನೆಯನ್ನು ಖಂಡಿಸಿ ಡಿಸೆಂಬರ್ 17ಕ್ಕೆ ಬೆಂಗಳೂರಿನ ಪುರಭವನದ ಮುಂಬಾಗದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮನವಿ ಮೂಲಕ ತಿಳಿಸಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷ ಎಂ.ಬಿ ಶಿವಕುಮಾರ ಮಾತನಾಡಿ ಪೊಲೀಸ್ ಆಯುಕ್ತರು ಮಾಲೂರಲ್ಲಿ ನಡೆದ ಇಂತಹ ಪ್ರಕರಣದಲ್ಲಿ ಆರೋಪಿಗೆ ಒಂದೇ ತಿಂಗಳಲ್ಲಿ ಗಲ್ಲು ಶಿಕ್ಷೆ ಕೊಡುವಂತೆ ಮಾಡಿದ್ದು ಈ ಪ್ರಕರಣದಲ್ಲಿಯೂ ಆರೋಫಿಗೆ 30 ದಿನಗಳಲ್ಲಿ ಗಲ್ಲು ಶಿಕ್ಷೆಯಾಗುವಂತೆ ಮಾಡುವಲ್ಲಿ ಪೊಲೀಸ್ ವ್ಯವಸ್ಥೆ ಕೆಲಸ ಮಾಡಲಿದೆ ಎಂದು ಬರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೀಲಶಾದ ತಹಸಿಲ್ದಾರ, ವಿನಯ ಅಂಗ್ರೊಳ್ಳಿ, ನಾಮದೇವ ನಾಗರಾಜ, ಬೈಲಪ್ಪಾ ನಾರಾಯಣ ಸ್ವಾಮಿ, ಜೆ.ವಿ ನೀಲಕಂಠ, ಎಚ್.ಎಮ್ ನರಸಿಂಹ ಮೂರ್ಥಿ ಇತರರು ಇದ್ದರು.

loading...