ಕೊಕಟನೂರ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯುವಂತೆ ದಯಾನಂದ ಸ್ವಾಮಿ ಆಗ್ರಹ

0
28


ಬೆಳಗಾವಿ

ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಜರಗುವ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಜಿಲ್ಲಾಡಳಿತ ನಿಷೇಧ ಮಾಡಬೇಕೆಂದು ವಿಶ್ವ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಹೇಳಿದರು.

 

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಡಿ.31ರಂದು ಅಥಣಿ ತಾಲೂಕಿನ ಕೊಕಟನೂರಿನ ಯಲ್ಲಮ್ಮನ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದರು.
ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನ ಆದೇಶದಂತೆ ಪ್ರಾಣಿ ಬಲಿಯನ್ನು ಮಾಡದಂತೆ ನೋಡಿಕೊಳ್ಳಬೇಕು. ಪ್ರಾಣಿ ಬಲಿ ನಿಲ್ಲಿಸಿ, ಅಹಿಂಸಾತ್ಮಕ ಸಾತ್ವಿಕ ಪೂಜೆ ಸಲ್ಲಿಸುವಂತೆ ಕೊರಿ ಭಕ್ತರಿಗೆ ದೇವಾಲಯದ ಮಂಡಳಿಗೆ ವಿನಂತಿಸಲಾಗುವುದು ಎಂದರು.
ಪ್ರಾಣಿ ಬಲಿ ತಡೆ ಜಾಗೃತಿಗಾಗಿ ಇಂದಿನಿಂದಲೇ ಅಥಣಿ ತಾಲೂಕು ಮತ್ತು ಕೊಕಟನೂರ ಜಾತ್ರೆಯ ವ್ಯಾಪ್ತಿಯಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ 5ದಿನಗಳ ಕಾಲ ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆ ಕೈಗೊಳ್ಳಲಿದ್ದೇವೆ ಎಂದರು.

ದೇವರ ಹೆಸರಿನಲ್ಲಿ ಹರಕೆಯ ರೂಪದಲ್ಲಿ ದೇವಾಲಯದ ಸುತ್ತಮುತ್ತಲಿನಲ್ಲಿ ಪ್ರಾಣಿ‌ಬಲಿ, ಮಾಂಸದ ನೈವಿದ್ಯ ಸೇರಿದಂತೆ ಜೀವ ಹಿಂಸಾತ್ಮಕ ಆಚರಣೆಗಳನ್ನು ಮಾಡದೆ ತೆಂಗಿನ ಕಾಯಿ, ಬಾಳೆ ಹಣ್ಣು, ಹೂವು ನೈವೇದ್ಯ ಮಾಡಬೇಕೆಂದು ವಿನಂತಿಸಿದರು.

loading...