ಫಿಲಿಪೈನ್ಸ್‌ನಲ್ಲಿ 6.8 ತೀವ್ರತೆಯ ಭೂಕಂಪನ: ಕನಿಷ್ಠ ಏಳು ಮಂದಿ ಸಾವು

0
1

ಮನಿಲಾ- ಫಿಲಿಪೈನ್ಸ್‌ನ ದಕ್ಷಿಣ ಮಿಂಡಾನಾವೊ ದ್ವೀಪದಲ್ಲಿ ಭಾನುವಾರ ಸಂಭವಿಸಿದ 6.8 ತೀವ್ರತೆಯ ಭೂಕಂಪನದ ಪರಿಣಾಮವಾಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ದಾವೊ ಡೆಲ್ ಸುರ್ ಪ್ರಾಂತೀಯ ವಿಪತ್ತು ಕಡಿತ ಮತ್ತು ನಿರ್ವಹಣಾ ಕಚೇರಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮ್ಯಾಗ್ಸೆಸೆ ಪಟ್ಟಣದ ಆಗ್ನೇಯಕ್ಕೆ 3 ಕಿ.ಮೀ.ದೂರದಲ್ಲಿ ಜಾಗತಿಕ ಕಾಲಮಾನದಲ್ಲಿ 6:11ಕ್ಕೆ ಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ 6 ವರ್ಷದ ಬಾಲಕಿ ಸಾವನ್ನಪ್ಪಿದ್ದರೆ, ಇನ್ನೂ 37 ಜನರು ಗಾಯಗೊಂಡಿದ್ದಾರೆ ಎಂದು ಹಿಂದಿನ ವರದಿಗಳು ಸೂಚಿಸಿವೆ.
ಪಾಡಾಡ ಪಟ್ಟಣದಲ್ಲಿ ಸೂಪರ್‌ ಮಾರ್ಕೆಟ್‌ ಕಟ್ಟಡವೊಂದು ಕುಸಿದು ಸೋಮವಾರ ರಕ್ಷಕರು ಇನ್ನೂ ಆರು ಮೃತ ದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಫಿಲ್ಸ್ಟಾರ್ ಗ್ಲೋಬಲ್ ಪತ್ರಿಕೆ ವರದಿ ಮಾಡಿದೆ, ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಭೂಕಂಪದ ನಂತರದ ಮೊದಲ ನಾಲ್ಕು ಗಂಟೆಗಳಲ್ಲಿ ದಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಕನಿಷ್ಠ 179 ಭೂಕಂಪಗಳು ದಾಖಲಾಗಿವೆ.

loading...