ಪ್ರತ್ಯೇಕ ಎರಡು ಅಪಘಾತ: ಇಬ್ಬರು ಬೈಕ್ ಸವಾರರ ಸಾವು

0
80

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಇಂದು ನಡೆದ ಎರಡು ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು ಓರ್ವ ವ್ಯಕ್ತಿ ಗಂಬೀರ ಗಾಯಗೊಂಡ ಘಟನೆ ನಡೆದಿದೆ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದ ಹತ್ತಿರ ನಡೆದ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ನಿವಾಸಿ ರೋಹಿತ ಪೋತದಾರ 30 ಮೃತಪಟ್ಟಿದ್ದು ಹಿಂಬದಿ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಗಾಯಾಳುವಿಗೆ ಚಿಕ್ಕೋಡಿ ತಾಲ್ಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ ಹತ್ತಿರ ಅಪರಿಚಿತ ವಾಹನ ಡಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಸಿದ್ದಪ್ಪ ಬಾಡಕರ 40 ಎಂದು ಗುರುತಿಸಲಾಗಿದೆ. ಎರಡೂ ಅಪಘಾತ ಪ್ರಕರಣಗಳು
ಅಂಕಲಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ.

loading...