ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ

0
36


ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮುಸ್ಲಿಮ್‌ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಮಂಗಳವಾರ ನಡೆಸಿದರು.

5 ಸಾವಿರಾರಕ್ಕೂ ಹೆಚ್ಚು ಸಂಖ್ಯೆಯ ಜನರು ಕೈಗೆ ಕಪ್ಪು ಬಟ್ಟೆ ಕಟ್ಟಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಕೇಂದ್ರ ಸರಕಾರ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಮಂಡಿಸಿದೆ. ಸಂವಿಧಾನ ವಿರೋಧಿಯಾಗಿದ್ದು, ದೇಶ ಒಡೆಯಲು ಈ ಕಾಯ್ದೆ ಜಾರಿಗೊಳಿಸಿದೆ ಎಂದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬೀಗಿ ಬಂದೋಬಸ್ತ್

ನಗರ ಸೇವಕ
ಬಾಬುಲಾಲ್ ಮುಜಾವರ್,ಸಮಾಜ ಸೇವಕ ಸಮೀರ್ ನಾಯಕ, ಮುಕ್ತಿ ಅಬ್ದುಲ್ ಅಜೀಜ್ ಖಾಜಿ,
ವಕೀಲರು ಆರ್ ಐ ಗರಗ, ಎಮ್ ಹತ್ತರಕಿ,
ಅತ್ಕರ ಪಟೇಲ್ , ಶಾಹೀದ ಪಿರಜಾದೆ, ಎಮ್ ಎ ಅಥಣಿ, ಐ ವಾಯ್ ಬಯಾಲ್, ಎಸ್ ಜೆ ಇನಾಂದಾರ್ , ಆದಿಲ್ ಸೌದಾಗರ, ಅಬ್ದುಲ್‌ ರಹೀಮ್ ಮುಲ್ಲಾ , ರೀಯಾಜ್ ಬಡೇಗರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

loading...