19 ರಂದು ವಿಶ್ವ ಹಿಂದು ಪರುಷತದಿಂದ ಹಿತಚಿಂತಕ ಅಭಿಯಾನ

0
59


ಬೆಳಗಾವಿ: ಹಿಂದುತ್ವ ಜಾಗೃತಿ ಹಾಗೂ ಸಂಸ್ಕಾರ, ಸಂಸ್ಕೃತಿಯನ್ನು ಬಲಿಷ್ಠಗೊಳಿಸಲು ಸರ್ವಧರ್ಮಗಳ‌ ಸಮ್ಮುಖದಲ್ಲಿ ಗುರುವಾರ 19 ರಂದು
ವಿಶ್ವ ಹಿಂದು ಪರುಷತ್, ಭಜರಂಗ ದಳದಿಂದ ಹಿತಚಿಂತಕ ಅಭಿಯಾನ ವಕೀಲರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಉತ್ತರ ಪ್ರಾಂತ
ಧರ್ಮಚಾರ್ಯ ಸಂಪರ್ಕ
ಪ್ರಮುಖರು ಸುಧಾರಕ ದೇಶಪಾಂಡೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,

ಜಗತ್ತಿನಲ್ಲಿ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ವಿಶ್ವ ಹಿಂದೂ ಸಂಘಟನೆ ಮಾಡಲಾಗಿದೆ. ಇದು ಯಾವುದೇ ಜಾತಿಗಳಿಗೆ ಸಿಮಿತವಾಗಿಲ್ಲ‌ ಸರ್ವ ಧರ್ಮ ಸಮಾನತೆಗಾಗಿ ಈ‌ ಸಂಘಟನೆಗೆ ಇದು ಎಲ್ಲಾ ದೇಶ ಭಕ್ತರು ಈ ಜಾಗೃತಿ ಕಾರ್ಯಕ್ರಮ ಕ್ಕೆ ಕೈಜೋಡಿಸಬೇಕೆಂದು.

ಕೆಲವು ಧರ್ಮಗಳು
ಜನರನ್ನು ಮತಾಂತರಗೊಳಿಸುತ್ತಿವೆ. ಧರ್ಮ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡಬಾರದು. ಎಲ್ಲರೂ ದೇಶಭಕ್ತರಾಗಿ ಹಿಂದೂ ರಾಷ್ಟ್ರವನ್ನು ಬೆಳೆಸೋಣ ಎಂದರು.

ಪೌರತ್ವ ಕಾಯ್ದೆ ಜಾರಿ ಯಾಗಿದ್ದು ಸ್ವಾಗತಿಸುತ್ತಿವೆ.
ದೇಶ ನುಸುಕೋರರಿಗೆ‌ ಕೇಂದ್ರ ಸರಕಾರ ಕಡಿವಾಣ ಮುಂದಾಗಿದೆ. ವಿವಿಧ ದೇಶಗಳಿಂದ ಜನರು ಅಕ್ರಮವಾಗಿ ಆಗಮಿಸಿ ದೇಶದಲ್ಲಿ ಸಂಸ್ಕೃತಿಯನ್ನು ಹಾಳಾಮಾಡುತ್ತಿದ್ದಾರೆ. ದೇಶದ ಭದ್ರತೆಗಾಗಿ ವಿಶ್ವ ಹಿಂದು ಪರಿಷತ್
ಹಿತಚಿಂತಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚಂದ್ರಶೇಖರ ಶಿವಾರ್ಚಾಯ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌ ಎಂದರು.

ಕೃಷ್ಣ ಭಟ ಪ್ರಾಂತಿ ಕೋಶಾದ್ಯಕ್ಷರು, ಮಾತನಾಡಿ, ಶ್ರೀಕಾಂತ ಕದಂ, ಡಾ. ಬಾಗೋಜಿ, ವಿಜಯ ಜಾಧವ, ಶಾರದಾ ಬೆಕಣೆ , ರೇಶ್ಮಾ ಖೋತ,
ಸತೀಶ ಮಾಳವದೆ,
ಹಾಗೂ ಇತರರು ಇದ್ದರು

loading...