ಹೆಣ್ಣು ಮಕ್ಕಳು ರಾಣಿ ಚನ್ನಮ್ಮ, ಗಂಡುಮಕ್ಕಳು ಸ್ವಾಮಿ ವಿವೇಕಾನಂದರಾಗಲಿ: ಕೇಂದ್ರ ಸಚಿವ ಅಂಗಡಿ

0
36


ಬೆಳಗಾವಿ

ಕೆಲ‌ ದೃಷ್ಟ ಶಕ್ತಿಗಳು ದೇಶವನ್ನು ಹಾಳು ಮಾಡುವುದನ್ನು ನೋಡಿದ್ದೇವೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ಹೆಣ್ಣು ಮಕ್ಕಳು ಇದ್ದವರು ರಾಣಿ ಚನ್ನಮ್ಮವಾಗಲಿ, ಗಂಡು ಮಕ್ಕಳು ಇದ್ದವರು ಸ್ವಾಮೀ ವಿವೇಕಾನಂದರಾಗಲಿ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.

ಬುಧವಾರ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದಿಂದ ರೈಲ್ವೆ ಇಲಾಖೆಯ ಸಹಕಾರದಿಂದ ತಾಯಿಯ ಮಡಿಲು ತೊಟ್ಟಿಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿಯ ಹಿರಿಯವರು ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವುದಕ್ಕೆ ಸಂತಸ ತಂದಿದೆ.ರಾಜ್ಯದ ಎಲ್ಲ ರೈಲ್ವೆ ನಿಲ್ದಾಣದಲ್ಲಿ ತಾಯಿಯ ಮಡಿಲನ್ನು ಇಡಲಾಗಿದೆ. ಮಕ್ಕಳಿಗೆ ಅನಾಥ ಪ್ರಜ್ಞೆ ಬಾರದಂತೆ ಕೇಂದ್ರ ಸರಕಾರ ನೋಡಿಕೊಳ್ಳಲಾಗುವುದು ಎಂದರು.

ಮಹಿಳಾ ‌ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ‌ ಸಚಿವೆ ಶಶಿಕಲಾ‌ ಜೊಲ್ಲೆ ಮಾತನಾಡಿ, 21ನೇ ಶತಮಾನದ ಕಂಪ್ಯೂಟರ್‌ ಯುಗದಲ್ಲಿದ್ದರೂ ತಾಯಿಗೆ ವಿಶಿಷ್ಟವಾದ ಗೌರವ ಇದೆ. ತಾಯಿಗೆ ಭಾರತಿಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನವಿದೆ. ಆದರೆ ಆಧುನಿಕ‌ ದಿನದಲ್ಲಿ ತಾಯಿಯ‌ ಗೌರವ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ಬೀದಿಗೆ ಎಸೆಯುವುದನ್ನು ಕೆಲವರು ಮಾಡುತ್ತಿರುವುದರಿಂದ ಮಕ್ಕಳ ಅನಾಥರಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಸ್ವಾಮಿ ವಿವೇಕಾನಂದ ಪ್ರತಿಷ್ಠಾನದವರು ಮಕ್ಕಳಿಗೆ ಜೀವ ತುಂಬುತ್ತಿದ್ದಾರೆ ಎಂದರು.
ಸರಕಾರದಿಂದ ಸಾಕಷ್ಟು ಸಹಾಯಕ ಸಹಕಾರ‌ ಇದೆ. ಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭವರಸೆ ನೀಡಿದರು.
ತಾಯಿ ಮುಗುವಿನ ಸಂಬಂಧ ಬಹಳ ಮುಖ್ಯ. ನಮ್ಮ‌ ಇಲಾಖೆಯಿಂದ ಮಕ್ಕಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲಾಗುವುದು ಎಂದರು.

ರಾಜ್ಯ ಸಭಾ ಸದಸ್ಯ ಡಾ‌. ಪ್ರಭಾಕರ ಕೋರೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ತಿನ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಅನಿಲ್ ಬೆನಕೆ, ರೈಲ್ವೆ ಇಲಾಖೆ‌ ಅಧಿಕಾರಿ ಅಜಯ ಸಿಂಗ್, ಬಸವರಾಜ ನವರಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...