ಘಟಪ್ರಭಾದಲ್ಲಿ ತರಕಾರಿ ಕೋಲ್ಡ್ ಸ್ಟೋರೇಜ್ ‌ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸಹಕಾರ ನೀಡಲಾಗುವುದು: ಕೇಂದ್ರ ಸಚಿವ ಅಂಗಡಿ

0
88


ಬೆಳಗಾವಿ

ಘಟಪ್ರಭಾದಲ್ಲಿ ತರಕಾರಿಗಾಗಿ ಕೋಲ್ಡ್ ಸ್ಟೋರೇಜ್ ಮಾಡುವುದು ರೈಲ್ವೆ ಇಲಾಖೆಯ ಕಾರ್ಯವಲ್ಲ. ಯಾರಾದರೂ ಇಲ್ಲಿ ಸ್ಟೋರೇಜ್ ಮಾಡಲು ಮುಂದಾದರೆ ರೈಲ್ವೆ ಇಲಾಖೆಯ ಸಂಪೂರ್ಣ ಸಹಕಾರ ಕೊಡಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಬುಧವಾರ ಘಟಪ್ರಭಾ-ಚಿಕ್ಕೋಡಿ ನಡುವಿನ ರೈಲುಮಾರ್ಗ ರಾಷ್ಟ್ತಕ್ಕೆ ಸಮರ್ಪಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪುಣಾ, ಮೀರಜ್, ಲೋಂಡಾದವರೆಗೆ ಜೋಡಣೆಯಾದರೆ ಕರ್ನಾಟಕ‌, ಗೋವಾ ಹಾಗೂ‌ ಮಹಾರಾಷ್ಟ್ರ ಕ್ಕೆ ರೈಲು ಜೋಡಣೆ ಮಾಡಲು ಸಹಕಾರವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ದೇಶದಲ್ಲಿ ಮೋದಿ ಪ್ರಧಾನಿಯಾಗಲು ಸಹಕಾರ ಮಾಡಿದ್ದಿದ್ದಾರೆ.

ರೈಲ್ವೆ ದೇಶದ ಆರ್ಥಿಕ‌ ಅಭಿವೃದ್ದಿಗೆ ರೈಲ್ವೆ ಇಲಾಖೆ. ಇದಕ್ಕೆ ತನ್ನದೆಯಾದ ಕೊಡುಗೆ ಇದೆ. ರೈಲ್ವೆ ನಿಲ್ದಾಣದಲ್ಲಿ ಶುಚಿಯಾಗಿಡಬೇಕು.
ಅಪಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದ ಜೈನ್, ಕ್ರೈಸ್ತರು ಸೇರಿದಂತೆ ಇನ್ನಿತರರು ಭಾರತಕ್ಕೆ ರಕ್ಷಣೆ ಕೋರಿ ಬರುತ್ತಿದ್ದಾರೆ. ಆದ್ದರಿಂದ ಪೌರ ಮಸುದೆಯನ್ನು‌ ಕಾಯ್ದೆ ಜಾರಿಗೆ ತರಲಾಗಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನದವರು ಮುಸ್ಲಿಂ ದೇಶದ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆದ್ದರಿಂದ ಭಾರತದಲ್ಲಿ ಇರುವ ಮುಸ್ಲಿಂರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಕೆಲವರು ಅವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಗೋಮಾಂಸ ಸ್ಟೋರೇಜ್ ಘಟಕ ಮಾಡಿಕೊಂಡು ದಂದೆ ನಡೆಸುತ್ತಿದ್ದರು. ಅದನ್ನು ಹೋರಾಟ ಮಾಡಿ ಅವರನ್ನು ಓಡಿಸುವ ಕಾರ್ಯ ಮಾಡಿದ್ದೇವು ಎಂದರು.
ಗೋಕಾಕ ಹಾಗೂ ಘಟಪ್ರಭಾ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಟಗಾರ ಪ್ರತಿಫಲದಿಂದಲೇ ರೈಲ್ವೆ ಯೋಜನೆಗೆ ಸಹಕಾರಿಯಾಗಿವೆ ಎಂದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಸುಮಾರು 22ವರ್ಷದಿಂದ ರಾಜ್ಯ ಸಭಾ ಸದಸ್ಯನಾಗಿದ್ದೇನೆ. ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು‌ 12 ನೇ ಮಂತ್ರಿ ಈ ಹಿಂದಿನ ಕರ್ನಾಟಕದವರೆ 11 ಜನ ಮಂತ್ರಿ ಆಗಿದ್ದರೂ ಕರ್ನಾಟಕದಲ್ಲಿ ಯಾವುದೇ ರೈಲ್ವೆ ಯೋಜನೆಯಾಗಲಿಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುರೇಶ ಅಂಗಡಿ ರೈಲ್ವೆ ಖಾತೆ ನೀಡಿರುವುದು ಕರ್ನಾಟಕದ ಪುಣ್ಯ ಎಂದರು.

ರೈಲ್ವೆ ಕಡಿಮೆ ದರಲ್ಲಿ ಪ್ಯಾಸೆಂಜರ್ ಹಾಗೂ‌ ಗೂಡ್ಸ್ ತೆಗೆದುಕೊಂಡುವುದು ರೈಲ್ವೆ. ಶೀಘ್ರದಲ್ಲೇ ಇಲೆಕ್ಟ್ರಾನಿಕ್ ರೈಲ್ವೆಗಳು ಬರುತ್ತವೆ. ಅತೀ ಬಡುವ ಇದ್ದವರು ವಿಮಾನದಲ್ಲಿ ಹೋಗಬಹದು. ಮೋದಿ ಅವರ ಕೊಡುಗೆಯಲ್ಲಿ ರೈಲ್ವೆಯೂ ಒಂದಾಗಿದೆ ಎಂದರು.

ಬೆಳಗಾವಿಯಿಂದ ಕಿತ್ತೂರು ಹಾಗೂ ಧಾರವಾಡದ ರೈಲು ಮಾರ್ಗ ಜೋಡಣೆಯಾಗಬೇಕಿದೆ. ಅದನ್ನು ಮಾಡುವುದಾಗಿ ಸುರೇಶ ಅಂಗಡಿ ಅವರು ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಕೆಲಸ ಸಿಕ್ಕಿರಲಿಲ್ಲ. ಹುಬ್ಬಳ್ಳಿ ವಲಯದಲ್ಲಿ ಕನ್ನಡಿಗರಿಗೆ ಕೆಲಸ ಸಿಗುವ ನಿಟ್ಟಿನಲ್ಲಿ ಸುರೇಶ ಅಂಗಡಿ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.

ಘಟಪ್ರಭಾ ವ್ಯಾಪ್ತಿಯಲ್ಲಿ ಸಾಕಷ್ಟು ಜನ ಕಬ್ಬು ಬೆಳೆಯುತ್ತಾರೆ. ಸಕ್ಕರೆ ಕಾರ್ಖಾನೆಗಳು ಸಾಕಷ್ಟಿವೆ. ಆದ್ದರಿಂದ ಈ‌ ಭಾಗದಲ್ಲಿ ತರಕಾರಿ ಕೋಲ್ಡ್ ಸ್ಟೋರೇಜ್ ಮಾಡುವ ಕೆಲಸ ಮಾಡಬೇಕೆಂದು ಹೇಳಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಜ ಮಹಾಂತೇಶ ಕವಟಗಿಮಠ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಸುರೇಶ ಅಂಗಡಿಗೆ ಸ್ಥಾನ ಸಿಕ್ಕ ಮೇಲೆ ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡುತ್ತಿದ್ದಾರೆ ಎಂದರು.

ಭಾರತದಲ್ಲಿರುವ ಸಾಮಾನ್ಯ ರೈತ ಬೆಳೆಯುವ ಬೆಳೆಗಳಿಗೆ ಸಮರ್ಪಕವಾದ ಬೆಲೆ‌ ಸಿಗುವಲ್ಲಿ ರೈಲು ಮಾರ್ಗ‌ಜೋಡಣೆಯಿಂದ ಅನುಕುಲವಾಗುತ್ತದೆ. ಬರುವ ದಿನಗಳಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಘಟಪ್ರಭಾದಲ್ಲಿ ರೈತರು ಬೆಳೆದ ಬೆಳೆಗಳಿಗಾಗಿ ಕೊಲ್ಡ್ ಸ್ಟೋರೇಜ್ ಮಾಡಲಿದ್ದಾರೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರದ ಬಂದ ಮೇಲೆ ರೈಲ್ವೆ ಇಲಾಖೆಯಲ್ಲಿ ಸುರೇಶ ಅಂಗಡಿ ನೇತೃತ್ವದಲ್ಲಿ ನಮ್ಮ ಭಾಗದಲ್ಲಿ ಸಾಕಷ್ಟು ಯೋಜನೆಗಳು ದೊರೆಯುತ್ತಿವೆ. ಬಹುವರ್ಷಗಳ ಬೇಡಿಕೆಯಾಗಿದ್ದ ರೈಲು ನಡುವಿನ ಜೋಡಣೆಯ ಕಾರ್ಯ ವೇಗವಾಗಿ ನಡೆಯುತ್ತಿವೆ ಎಂದರು.

ರೈಲು ಜೋಡಣೆಯ ಜತೆಗೆ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಯನ್ನು ಮಾಡಬೇಕೆಂದು ಪ್ರಸ್ತಾಪ ಇದೆ. ಹೆಚ್ಚಿನ ಪ್ರಮಾಣದಲ್ಲಿ ನಿಪ್ಪಾಣಿ,ಕೊಲ್ಲಾಪುರ, ಕುಡುಚಿ, ಚಿಕ್ಕೋಡಿ ರೈಲು ಮಾರ್ಗವನ್ನು ಜೋಡಣೆ ಮಾಡಲು ಯೋಜನೆಯನ್ನು ಸುರೇಶ ಅಂಗಡಿ ಅವರು ರೂಪಿಸಿದ್ದಾರೆ‌. ಆದರೆ ಜಮೀನು ಸಿಗುತ್ತಿಲ್ಲ ಅದನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಘಟಪ್ರಭಾ ಹಾಗೂ ಚಿಕ್ಕೋಡಿ ನಡುವಿನ ರೈಲು ಮಾರ್ಗ ಬಹು ದಿನಗಳ ಬೇಡಿಕೆಯಾಗಿತ್ತು. ರಾಯವಾಗ ರೈಲ್ವೆ ನಿಲ್ದಾಣಕ್ಕೆ ಎರಡೂ ರೈಲು‌ಗಳನ್ನು ನಿಲ್ಲಿಸಲು ಆರಂಭಿಸಿರುವುದು ಹೆಮ್ಮೆಯ‌ ಸಂಗತಿ ಎಂದರು.
ಈ ಭಾಗದ ರೈತರು ಗೋವಾ ಮಹಾರಾಷ್ಟ್ರಕ್ಕೆ ತರಕಾರಿ ಮಾರಾಟ ಮಾಡುತ್ತಾರೆ. ಆದ್ದರಿಂದ ಅವರಿಗಾಗಿ ಕೋಲ್ಡ್ ಸ್ಟೋರೇಜ್ ಮಾಡಬೇಕೆಂದು ವಿನಂತಿಸಿದರು.

ಕೆಎಲ್ಇ ನಿರ್ದೇಶಕ ರಾಜು ಮುನವಳ್ಳಿ, ಬಿಜೆಪಿ ಮುಖಂಡ ಈರಣ್ಣ ಕಡಾಡಿ, ರೈಲ್ವೆ ಅಧಿಕಾರಿ ಎ.ಕೆ.ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...