ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ನಾಳೆ ತಾರಾ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

0
8

ಕೋಲ್ಕತಾ:-ಮುಂದಿನ ಆವೃತ್ತಿಯ ವಿಶ್ವದ ಶ್ರೀಮಂತ ಲೀಗ್ ಇಂಡಿಯನ್‌ ಸೂಪರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ನಾಳೆ ಇಲ್ಲಿನ ಹೋಟೆಲ್‌ವೊಂದರಲ್ಲಿ ನಡೆಯಲಿದ್ದು, ಎಂಟೂ ಫ್ರಾಂಚೈಸಿಗಳು ತನ್ನಲ್ಲಿ ಉಳಿದಿರುವ ಸ್ಥಾನಗಳನ್ನು ಅಗತ್ಯಕ್ಕೆ ತಕ್ಕಂತೆ ತುಂಬಿಸಿಕೊಳ್ಳವತ್ತ ಚಿತ್ತ ಹರಿಸಲಿವೆ.
ಮೂಲ ಬೆಲೆ 2 ಕೋಟಿ ರೂ. ಹೊಂದಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಕ್ಷಿಣ ಆಫ್ರಿಕಾದ ಹಿರಿಯ ವೇಗದ ಬೌಲರ್ ಡೇಲ್ ಸ್ಟೇನ್ ಅವರೊಂದಿಗೆ 332 ಕ್ರಿಕೆಟಿಗರು (186 ಭಾರತೀಯ, 146 ಸಾಗರೋತ್ತರ ಆಟಗಾರರು) ಹರಾಜಿಗೆ ಒಳಗಾಗಲಿದ್ದಾರೆ.
ಒಟ್ಟು ಎಂಟು ಫ್ರಾಂಚೈಸಿಗಳಿಂದ ಭರ್ತಿ ಮಾಡಲು ಕೇವಲ 73 ಸ್ಥಾನಗಳನ್ನು ಉಳಿದಿರುವುದರಿಂದ ಈ ಬಾರಿಯ ಹರಾಜು ದೊಡ್ಡದೇನಲ್ಲ. ಇದರಲ್ಲಿ 29 ವಿದೇಶಿ ಆಟಗಾರರನ್ನು ಖರೀದಿಸಬಹುದು.
42.70 ಕೋಟಿ ರೂ. ಕಿಂಗ್ಸ್ ಇಲೆವೆನ್ ಪಂಜಾಬ್ ಖರ್ಚು ಮಾಡಲು ಪರ್ಸ್ ನಲ್ಲಿರುವ ಗರಿಷ್ಠ ಮೊತ್ತ ಮತ್ತು ಟೀಮ್ ಇಂಡಿಯಾ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿಈ ಬಾರಿ ತಂಡವನ್ನು ಮುನ್ನಡೆಸುವ ಸಮರ್ಥ ಆಟಗಾರನನ್ನು ಪಂಜಾಬ್‌ ಹುಡುಕಲಿದೆ. ಇಂಗ್ಲೆಂಡ್‌ ಗೆ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅಥವಾ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆ್ಯರನ್ ಫಿಂಚ್‌ ಅವರಿಗೆ ಗಾಳ ಹಾಕಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಮಾನ್ ಅವರನ್ನು ಒಳಗೊಂಡಿದ್ದರು. ಸ್ಪಿನ್ ಬಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೆಚ್ಚು ಕಡಿಮೆ ಎಲ್ಲ ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಗಾಯಗಳ ಸ್ಥಾನ ತುಂಬುವ ಆಟಗಾರರನ್ನು ಖರೀದಿಸುವ ಕಡೆ ಇವೆರಡೂ ಗಮನ ಹರಿಸಲಿವೆ. ಈ ತಂಡಗಳು ತನ್ನ ಖಾತೆಯಲ್ಲಿ ಹೆಚ್ಚು ಹಣ ಹೊಂದಿಲ್ಲ. ಇರುವ ಹಣದಲ್ಲೇ ಅಚ್ಚುಕಟ್ಟಾಗಿ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ. ಆದರೂ, ಆರ್‌ಸಿಬಿ ಖಾತೆಯಲ್ಲಿ 27.90 ಕೋಟಿ ರೂ.ಮಾತ್ರ ಇದೆ. ಮುಂಬರುವ ಋತುವಿಗೆ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಬದಲಾವಣೆ ಮಾಡಿಕೊಂಡಿದೆ. ಆದರೂ, ಗುರುವಾರ ಹರಾಜು ಪ್ರಕ್ರಿಯೆಯಲ್ಲಿಆರ್‌ಸಿಬಿ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಮತ್ತು ಪಿಯೂಷ್ ಚಾವ್ಲಾ ಅವರಂತಹ ದೊಡ್ಡ ಆಟಗಾರರನ್ನು ಬಿಡುಗಡೆ ಮಾಡಿರುವ ಕೋಲ್ಕತಾ ನೈಟ್ ರೈಡರ್ಸ್ , ಕ್ರಿಸ್ ಲಿನ್ ಸ್ಥಾನಕ್ಕೆ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಖರೀದಿಸಲು ಆಸಕ್ತಿ ಹೊಂದಿದೆ. ಕೆಕೆಆರ್ ಪರ್ಸ್ ನಲ್ಲಿ ಎರಡನೇ ಅತಿ ಹೆಚ್ಚು ಮೊತ್ತ 35.65 ಕೋಟಿ ರೂ. ಇದೆ.
ಹಾಗಾಗಿ ಇಂಗ್ಲೆಂಡ್‌ನ ಜೇಸನ್ ರಾಯ್ ಮತ್ತು ಅಲೆಕ್ಸ್ ಕ್ಯಾರಿ ಅವರ ಮೇಲೆ ಕೆಕೆಆರ್‌ ಕಣ್ಣಿಟ್ಟಿದೆ. ಜತೆಗೆ, ಪಿಯೂಷ್ ಚಾವ್ಲಾ ಬದಲಿಗೆ ದೇಶೀಯ ಸ್ಪಿನ್ನರ್ ಖರೀದಿಸಬಹುದು.
ಕೆಕೆಆರ್ ನಂತೆಯೇ ದೆಹಲಿ ಕ್ಯಾಪಿಟಲ್ಸ್ ಕೂಡ ವಿದೇಶಿ ಆಟಗಾರರ ಮೇಲೆ ಚಿತ್ತ ನೆಟ್ಟಿದೆ. ದೆಹಲಿ ಕ್ಯಾಪಿಟಲ್ಸ್ ಖಾತೆಯಲ್ಲಿ 27.85 ಕೋಟಿ ರೂ. ಉಳಿದಿದೆ, ಆದ್ದರಿಂದ ಅವರು ಉತ್ತಮ ಬೆಲೆಗೆ ಕಡಿಮೆ ಬೆಲೆಗೆ ಅತ್ಯುತ್ತಮ ಆಟಗಾರರನ್ನು
ಖರೀದಿಸುವ ಕಡೆ ಗಮನ ಹರಿಸಲಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ತಮ್ಮ ಪರ್ಸ್‌ನಲ್ಲಿ ಕ್ರಮವಾಗಿ 28.90 ಕೋಟಿ ರೂ. ಹಾಗೂ 17 ಕೋಟಿ ರೂ. ಹೊಂದಿವೆ. ಇವರೆಡೂ ತಂಡಗಳು ದೇಶೀಯ ಪ್ರತಿಭಾವಂತ ಆಟಗಾರರನ್ನು ಖರೀದಿಸುವ ಕಡೆ ಗಮನ ಹರಿಸಬಹುದು.

ಯಶಸ್ವಿ ಜೈಸ್ವಾಲ್ ಎಲ್ಲರ ಚಿತ್ತ:
ಹದಿನೇಳರ ಪ್ರಾಯದ ಯಶಸ್ವಿ ಜೈಸ್ವಾಲ್, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರ ಮೇಲೆ ಫ್ರಾಂಚೈಸಿಗಳ ಕಣ್ಣಿದೆ. ಜತೆಗೆ, ಎತ್ತರದ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್ ಮತ್ತು ಅಭಿಮನ್ಯು ಈಶ್ವರನ್ ಅವರಿಗೂ ಬೇಡಿಕೆ ಇದೆ.
ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ತಮ್ಮ ಸಾಮರ್ಥ್ಯ ಹಾಗೂ ಕೌಶಲ ಪರೀಕ್ಷಿಸಲು ಎಲ್ಲ ಆಟಗಾರರಿಗೂ ಐಪಿಎಲ್‌ ಅತ್ಯುತ್ತಮ ವೇದಿಕೆಯಾಗಿದೆ. ವಿರಾಟ್ ಕೊಹ್ಲಿ, ಆರ್‌ಸಿಬಿಗೆ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು. ಹಾಗಾಗಿ, ಸಾಗರೋತ್ತರ ಆರಂಭಿಕ ಆಟಗಾರನಿಗೆ ನಾಳೆ ಪ್ರಯತ್ನಿಸಬಹುದು.
ಎಲ್ಲಾ ಫ್ರ್ಯಾಂಚೈಸಿಗಳು ವೆಸ್ಟ್ ಇಂಡೀಸ್ ನ ಬಿಗ್-ಹಿಟ್ಟರ್ ಶಿಮ್ರಾನ್ ಹೆಟ್ಮೇರ್ ಅವರ ಖರೀದಿಸಲು ಆಸಕ್ತ ವಹಿಸಬಹುದು.ಏಕೆಂದರೆ, ಅವರು ಭಾರತದ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ 139 ರನ್ ಚಚ್ಚಿದ್ದರು. ಅವರ ಮೂಲಬೆಲೆ 50 ಲಕ್ಷ ರೂ. ಇದೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಗೂ ಬೇಡಿಕೆ ಹೆಚ್ಚಾಗಲಿದೆ.

loading...