ಕೃಷಿ ಭೂಮಿ: ಭೂಸ್ವಾದಿನ ಖಂಡಿಸಿ ರೈತರಿಂದ ಧರಣಿ

0
9

ಕೃಷಿ ಭೂಮಿ: ಭೂಸ್ವಾದಿನ ಖಂಡಿಸಿ ರೈತರಿಂದ ಧರಣಿ
ಬುಡಾ ಪ್ರಾಧಿಕಾರದಿಂದ ರೈತರ ಜಮೀನು ಮುಟ್ಟಗೋಲು
ಬೆಳಗಾವಿ: ರೈತರು ಉಳುಮೆ ಭೂಮಿಯನ್ನು ಬುಡಾ ನಗರಾಭಿವೃದ್ಧಿ ಪ್ರಾಧಿಕಾರ ಭೂಸ್ವಾದಿಯನ್ನು ಮಾಡಿಕೊಳ್ಳುತ್ತಿರುದರನ್ನು ಖಂಡಿಸಿ ಕರ್ನಾಟಕ ರಾಜ್ಯರಯಿತ ಸಂಘ ಹಾಗೂ ಹಸಿರು ಸೇನೆಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಬುಧವಾರ ರೈತರು ಧರಣಿ ನಡೆಸಿದರು.
ನಗರದ ಕನಕದಾಸ ವೃತ್ತದಿಂದ ಬುಡಾ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ ನಗರಾಭಿವೃದ್ಧಿ ಪ್ರಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಣಬರಗಿ ವ್ಯಾಪ್ತಿಯ ಅತೀ ಫಲವತ್ತತೆಯ ಕೃಷಿ ಭೂಮಿಯನ್ನು ವಸತಿ ಯೋಜನೆಯಿಂದ ಸರಕಾರ ಕೈಬಿಡಬೇಕು. ಈಗಾಗಲೇ ನೆಲಸಿರುವ ( ಕುಟುಂಬಗಳ) ನಿವೇಶನಗಳನ್ನು ಸರಕಾರ ಯೋಜನೆಯಡಿಯಲ್ಲಿ ಸಕ್ರಮಗೊಳಿಸಲು ಸರಕಾರಕ್ಕೆ ವಿನಂತಿಕೊAಡರು.
೨೦೦೭ ರಿಂದ ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ ಬುಡಾ ಅಧಿಕಾರಿಗಳು ರೈತರ ಭೂಮಿಯನ್ನು ಕಸಿದುಕೊಳ್ಳುವಲ್ಲಿ ಕಾರ್ಯನಿತರಾಗಿದ್ದಾರೆ. ಇವರ ನಿರ್ಲಕ್ಷö್ಯದಿಂದ ಗುಣಮಟ್ಟದ ಜಮೀನು ಸರಕಾರದ ಪಾಲಾಗುತ್ತಿದೆ.
ವಸತಿಗೆ ಯೋಗ್ಯವಿಲ್ಲದ ಭೂಮಿಯನ್ನು ಸರಕಾರ ಕೈವಶ ಮಾಡಿಕೊಳ್ಳುತ್ತಿದೆ. ಇದರಿಂದ ೪೦ ಏಕರೇಯ ೨೦೦ ರೈತ ಕುಟುಂಬಗಳು ಬೀದಿಗೆ ಬರುತ್ತಿವೆ. ೧೬೦ ಏಕರೇ ಪೈಕಿ ೧೨೦ ಏಕರೇ ರೈತರಿಗೆ ಪರಿಹಾರ ಕಲ್ಪಿಸಲಾಗಿದೆ. ಇನ್ನೂಳಿದ ರೈತರ ಭೂಮಿಯನ್ನು ಸರಕಾರ ಮುಟ್ಟುಗೊಲು ಮಾಡಿಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಬನ್ ಮಲಾಯಿ, ಕೃಷ್ಣಾ ಅಷ್ಟೇಕರ್ , ಬಾವಕನ್ನಾ ಮಲಾಯಿ, ಮಾರುತಿ ಮಲಾಯಿ, ಉಮೇಶ್ ಹಲಗೇಕರ್, ಕೃಷ್ಣ ಮಲಾಯಿ, ಪರಶುರಾಮ ಹಲಗೇಕರ್, ಸಿದ್ದರಾಯಿ ಅಷ್ಟೇಕರ್ ಹಾಗೂ ಇತರರು ಇದ್ದರು.

ಅಧಿಕಾರಿಗಳ ವಿರುದ್ಧ ರೈತ ಮಹಿಳೆ ಜಯಶ್ರೀ ಗುರನ್ನವರ ಆಕ್ರೋಶ
ನಗರಾಭಿವೃದ್ಧಿ ಪ್ರಾಧಿಕಾರಿ ರೈತರನ್ನು ಅಭಿವೃದ್ಧಿ ಮಾಡಬೇಕಿದೆ ಹೊರತು ರೈತರನ್ನು ಬೀದಿಗೆ ತರುವ ಪ್ರಯತ್ನ ಮಾಡಬಾರದು. ಈಗಿರುವ ಬಡ ಕುಟುಂಬಗಳ ಉಳಿಮೆ ಭೂಮಿಯನ್ನು ನಂಬಿ ಉಪಜೀವನ ಸಾಗಿಸುತ್ತಿದ್ದಾರೆ. ರೈತರನ್ನು ಕಡೆಗಣಿಸುವ ಬುಡಾ ಇಲಾಖೆ ಬುಡಕ್ಕೆ ಬೆಂಕಿ ಇಡುವ ಸಂದರ್ಭ ಎದುರಾಗಬಹುದು ಎಂದು ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು. ಹಿರಿಯರ ಬೇವರಿನ ಆಸ್ತಿಯನ್ನು ಸರಕಾರ ಭೂಸ್ವಾದಿನ ಮಾಡಿಕೊಳ್ಳುತ್ತಿರುವುದು ಖಂಡನೀಯ. ಸರಕಾರ ಶೀಘ್ರ ಸ್ಪಂಧಿಸಬೇಕೆAದರು. ಕೈತಪ್ಪಿದರೆ ಧರಣಿ ನಡೆಸಲಾಗುವುದು ಮನವಿ ಮಾಡಿಕೊಂಡರು.
೦೨

loading...