ಗಡಿ ಖ್ಯಾತೆ ತೆಗೆದ ಮಹಾ ಸಿಎಂ‌ ಠಾಕ್ರೆ: ಗಡಿ ವಿವಾದ ಪಿಒಕೆ‌ ಹೋಲಿಕೆ

0
25

ಬೆ
ಬೆಳಗಾವಿ

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಕಾಶ್ಮೀರ ಪಿಒಕೆ ಹೋಲಿಕೆ ಮಾಡಿದ‌ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯಿಂದ ಮತ್ತೆ ಗಡಿ ಖ್ಯಾತೆ ತೆಗೆದಿದ್ದಾರೆ.

ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗಡಿ ವಿವಾದ ಪ್ರಸ್ತಾಪ ಮಾಡಿರುವ ಉದ್ದವ ಠಾಕ್ರೆ ಕೇಂದ್ರ ಸರ್ಕಾರ ಸಿಎಎ ಮೂಲಕ ಬಾಂಗ್ಲಾದೇಶ ಹಿಂದುಗಳಿಗೆ ರಕ್ಷಣೆ ಕೊಡಲು ಹೊರಟಿದೆ.

ಆದರೆ ಅದಕ್ಕೂ ಮೊದಲು ಕರ್ನಾಟಕದಲ್ಲಿ ಇರುವ ಮರಾಠಾ ಹಾಗೂ ಹಿಂದುಗಳ ರಕ್ಷಣೆ ಮಾಡಬೇಕಿದೆ. ಬೆಳಗಾವಿ, ನಿಪ್ಪಾಣಿ, ಕಾರಾವರ ಸೇರಿ ಅನೇಕ ಪ್ರದೇಶದ ಜನರು ಮಹಾರಾಷ್ಟ್ರ ಸೇರಲು ಬಯಸಿದ್ದಾರೆ ಎಂದರು.

ಇದು ಕರ್ನಾಟಕ ವ್ಯಾಪ್ತ ಮಹಾರಾಷ್ಟ್ರ ಅಂತಾ ಹೊಸದಾಗಿ ಹೆಸರು ಇಡುವೆ. ಹೇಗೆ ಪಾಕ್ ವ್ಯಾಪ್ತಿ ಕಾಶ್ಮೀರ ಇದೇ ಹಾಗೇ ಕರ್ನಾಟಕ ವ್ಯಾಪ್ತ ಮಹಾರಾಷ್ಟ್ರ ಎಂದ ಮಹಾ ಸಿಎಂ ಠಾಕ್ರೆ. ಕರ್ನಾಟಕ ಸರ್ಕಾರದಿಂದ ಗಡಿ ಬಾಗದ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗುತ್ತಿದೆ ಎಂದು ಉದ್ದವ ಠಾಕ್ರೆ ಬಿಜೆಪಿ‌ ಸರಕಾರದ ವಿರುದ್ದ ಹರಿಹಾಯ್ದರು.

loading...