ಕಬ್ಬಿನ ತೂಕದಲ್ಲಿ ಮೋಸ‌ ಮಾಡುವ ಕಾರ್ಖಾನೆಯ ವಿರುದ್ದ ಕ್ರಮ: ಸಚಿವ ಸಿ.ಟಿ.ರವಿ

0
47

ಬೆಳಗಾವಿ

ಕಬ್ಬು ಬೆಳೆದ ರೈತರಿಗೆ ಸಕ್ಕರೆ ಕಾರ್ಖಾನೆಯವರು ತೂಕದಲ್ಲಿ ಮೋಸ ಮಾಡುತ್ತಿದ್ದರೆ ಅದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಪ್ರವಾಸೋದ್ಯಮ ಹಾಗೂ ಸಕ್ಕರೆ‌ ಸಚಿವ ಸಿ.ಟಿ.ರವಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಕ್ಕರೆ ಕಾರ್ಖಾನೆಯಲ್ಲಿ ಕೆಲವರು ಖದೀಮರು ಇದ್ದಾರೆ. ಒಳ್ಳೆಯವರು ಇದ್ದಾರೆ. ರೈತರು ಬೆಳೆದ ಕಬ್ಬಿನ ತೂಕ ಮಾಡುವವರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.

 

ಕಬ್ಬು ನಿಯಂತ್ರಣ ಮಂಡಳಿಯ ಇಲಾಖೆ ನಿರ್ದೇಶಕರು ಹಾಗೂ ರೈತರು ಸಕ್ಕರೆ ಕಾರ್ಖಾನೆಯ ಒಳಗೊಂಡ ಮುಖಂಡರ ಸಭೆ ಕರೆಯಲಾಗಿದೆ.
ಈಗಾಗಲೇ 61 ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಿವೆ. ಎಲ್ಲ ಸಕ್ಕರೆ ಕಾರ್ಖಾನೆಗಳು 11948 ಕೋಟಿ ಬಾವತಿಸಬೇಕು. 1255 ಕೋಟಿ ಪಾವತಿಸಿದೆ.
ಕಳೆದ ಸಾರಿ 355 ಮೆಟ್ರಿಕ್ ಟನ್ ಕಬ್ಬು ಬೆಳೆದಿದ್ದು 8 ಕಾರ್ಖಾನೆ 38.44 ಲಕ್ಷ ಬಾಕಿ ಕೊಡಬೇಕಿದೆ ಎಂದರು.

ಉತ್ತರ ಪ್ರದೇಶದಲ್ಲಿ 357, ಮಹಾರಾಷ್ಟ್ರದಲ್ಲಿನ355 ಕೋಟಿ ಕರ್ನಾಟಕದಲ್ಲಿ 37ಕೋಟಿ‌ ರು. ಬಾಕಿ ಇದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಎಫ್ ಆರ್ ಫಿ ದರದಂತೆ ಬಾಕಿ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು‌ ಹೇಳಿದರು.

ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಗೆ ಸರಕಾರದಿಂದ 2 ಕೋಟಿ ಆರ್ಥಿಕ‌ ನೆರವು ನೀಡಲಾಗಿದೆ.
ಅತೀವೃಷ್ಠಿ ಕಾರಣದಿಂದ 66 ಲಕ್ಷ ಟನ್ ಕಬ್ಬು ಕಡಿಮೆಯಾಗುವ ನಿರೀಕ್ಷೆ ಇದೆ. ರೈತರು ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪತ್ರದ ಮೂಲಕ ಒಡಂಬಡಿಕೆ ಮಾಡಿಕೊಂಡರೆ ಮಾತ್ರ ಸರಕಾರ ಮಧ್ಯಸ್ಥಿಕೆ ವಹಿಸಲು ಬರುತ್ತದೆ. ಇದನ್ನು ಮಾಡಿದರೆ ಸರಕಾರ ಮಾಲೀಕರ ‌ಮೂಗು ಹಿಡಿದು ಬಾಕಿ ಕೊಡಿಸಲಾಗುವುದು ಎಂದರು.

ಫಸಲಭಿಮಾ ವ್ಯಾಪ್ತಿಯಲ್ಲಿ ಕಬ್ಬು ಮತ್ತು‌ಕಾಫೀ ಪರಿಹಣನೆಗೆ ತೆಗೆದುಕೊಳ್ಳುವಂತೆ ಸಂಪುಟದಲ್ಲಿ ಚರ್ಚೆ ನಡೆಸಿ‌ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೆ ಇನ್ನೂ ಯಾವ ಬೆಳೆ‌ ಸೇರ್ಪಡೆಗೊಳಿಸಬೇಕೆಂಬ ರೈತರು ಮನವಿ ನೀಡಿದರೆ ಅದನ್ನು ಕೇಂದ್ರ ಸರಕಾರದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

loading...