ಪಾಕಿಸ್ತಾನದ ನುಸುಳು ಕೋರರಿಗಾಗಿ ಕಾಂಗ್ರೆಸ್ ಗಲಭೆ ಮಾಡ್ತಿದ್ದಾರಾ ? : ಸಚಿವ ಸಿ.ಟಿ.ರವಿ

0
16

ಬೆಳಗಾವಿ

ಸತ್ಯಾಸತ್ಯತೆ ತಿಳಿಯದೆ ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯ‌ ವಿರುದ್ದ ಗಲಾಟೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸುಳ್ಳು ಅಪ್ರಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ‌ ದೇಶದ 132 ಕೋಟಿ ಜನರ ಪೌರತ್ವ ಹೋಗಿಲ್ಲ. ಈ ಕಾಯ್ದೆ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನುಸುಳುಕೋರರು ಬಂದಿದ್ದಾರೆ. ಅವರಿಗೆ ತೊಂದರೆಯಾಗುತ್ತದೆ ಎಂದರು.
30 ಸಾವಿರಕ್ಕೂ ಹೆಚ್ಚು ‌ನಿರಾಶ್ರಿತರು ನಮ್ಮಲ್ಲಿದ್ದಾರೆ. ಕಾರಣ ಮೂರು ದೇಶ ಇಸ್ಲಾಂ ರಾಷ್ಟ್ರ ಎಂದು‌ ಘೋಷಣೆ ಮಾಡಿದ್ದಾರೆ.

ಗಲಭೆ ಮಾಡುವವರಿಗೆ ಸಂವಿಧಾನದ ಮೇಲೆ‌ ಗೌರವ ಇದೆಯಾ ಎಂದು ಪ್ರಶ್ನಿಸಿದ ಅವರು, ಪೌರತ್ವ ಕಿತ್ತುಕೊಂಡಿದ್ದಾರೆ ಎಂದು ಕರ್ನಾಟಕದಲ್ಲಿ ಬೆಂಕಿ‌ ಹಚ್ಚುತ್ತಿದ್ದಾರೆ. ಪೌರತ್ವದಿಂದ ಯಾವ ವ್ಯಕ್ತಿಗೆ ತೊಂದರೆಯಾಗಿದೆ ಎಂದು ಹೇಳಲಿ.

ಚಳುವಳಿಯ ನೆಪದಲ್ಲಿ‌ ಹಿಂಸಾಚಾರ ಸೃಷ್ಠಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ರಾಜಕೀಯ ವಿರೋಧಿಗಳು ಅಲ್ಪಸಂಖ್ಯಾತದವರನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದ್ದಾರೆ.

ಹಿಂಸಾಚಾರ ಸಂವಿಧಾನ ಒಪ್ಪಿಕೊಳ್ಳುವುದಿಲ್ಲ. ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎನ್ ಆರ್ ಸಿ ತರುವುದಾಗಿ ಹೇಳಿದ್ದರು. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗಲು ಹೇಳಿದ್ದರು. ಆದರೆ ಅವರಿಗೆ ಮಾಡುವ ಯೋಗ್ಯತೆ‌ ಇರಲಿಲ್ಲ. ನಮ್ಮ ಸರಕಾರ ಮಾಡಿದೆ ಎಂದರು.
ರಾಜ್ಯಕ್ಕೆ ಬೆಂಕಿ ಹಾಕುವುದಾಗಿ‌ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ‌ ನೀಡಿದರು. ಆದರೆ ಮಾಜಿ‌ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಯಾವಬ್ಬ ಕಾಂಗ್ರೆಸ್ ನಾಯಕರು ಖಂಡಿಸಲಿಲ್ಲ. ನಿನ್ನೆ ಮೃತಪಟ್ಟ ಇಬ್ಬರು ಸಾವಿಗೆ ಖಾದರ್ ಅವರೇ ಕಾರಣ ಎಂದು ಹರಿಹಾಯ್ದರು.

ಸೋಶಿಯಲ್ ಮಿಡಿಯಾದಲ್ಲಿ ಪ್ರಚೋಧನೆ‌ಮಾಡುವವರು,‌ಮತದಾರರನ್ನು ಮನವೊಲಿಸಲು ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರುವುದಿಲ್ಲವೋ ಅಂಥವರಿಗೆ ಪೋಲೀಸರ ಭಾಷೆಯಲ್ಲಿ, ಮಿಲಿಟರಿ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದರು.

loading...