ರಣಜಿ: ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ

0
6

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ ಸಿಎ ಅಂಗಳದಲ್ಲಿ ನಡೆದೆ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ನಿರೀಕ್ಷೆಯಂತೆ ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ ತಂಡಕ್ಕೆ ಮೂರು ಹಾಗೂ ಉತ್ತರ ಪ್ರದೇಶ ತಂಡಕ್ಕೆ ಒಂದು ಅಂಕ ಲಭಿಸಿದೆ.
ನಾಲ್ಕನೇ ದಿನವಾದ ಶುಕ್ರವಾರ ಒಂದು ವಿಕೆಟ್ ಗೆ 29 ರನ್ ಗಳಿಂದ ಆಟ ಮುಂದುವರಿಸಿ, 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ಎರಡು ಪಂದ್ಯಗಳಿಂದ ಒಂಬತ್ತು ಅಂಕ ಕಲೆ ಹಾಕಿದೆ.
ಮೊದಲ ವಿಕೆಟ್ ಮೂರನೇ ದಿನ ಕಳೆದುಕೊಂಡಿದ್ದ ಉತ್ತರ ಪ್ರದೇಶ ತಂಡ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಎರಡನೇ ವಿಕೆಟ್ ಗೆ ಮಾಧವ್ ಕೌಶಿಕ್ ಹಾಗೂ ಅಲ್ಮಾಸ್ ಶೌಕಾತ್ ತಂಡಕ್ಕೆ 82 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಾಧವ್ 45 ರನ್ ಗಳಿಸಿದ್ದಾಗ ಡೇವಿಡ್ ಮಥಾಯಿಸ್ ಎಸೆತವನ್ನು ತಪ್ಪಾಗಿ ಗುರುತಿಸಿ ದೇವದತ್ ಪಡಿಕ್ಕಲ್ ಅವರಿಗೆ ಕ್ಯಾಚ್ ನೀಡಿದರು. ಮೊದಲಾವಧಿಯ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ಉತ್ತರ ಪ್ರದೇಶ ಒಂದು ವಿಕೆಟ್ ಕಳೆದುಕೊಂಡಿತು.
ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್ ಮನ್ ಆಕಾಶ್ ದೀಪ್ ನಾಥ್ 38 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
ಆರಂಭಿಕ ಅಲ್ಮಾಸ್ ಶೌಕಾತ್ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ ಆಟ ಪ್ರದರ್ಶಿಸಿ ರನ್ ಗಳನ್ನು ಗುಡ್ಡೆ ಹಾಕುತ್ತಾ ಸಾಗಿದರು. ಪಂದ್ಯದ 70ನೇ ಓವರ್ ನ ಮೂರನೇ ಎಸೆತದಲ್ಲಿ ಅಲ್ಮಾಸ್ ಬೌಂಡರಿ ಬಾರಿಸಿ ಶತಕ ದಾಖಲಿಸಿದರು.
ಅಲ್ಮಾಸ್ ಶತಕ ದಾಖಲಿಸುತ್ತಿದ್ದಂತೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 281
ಕರ್ನಾಟಕ ಮೊದಲ ಇನ್ನಿಂಗ್ಸ್ 321’
ಉತ್ತರ ಪ್ರದೇಶ ಎರಡನೇ ಇನ್ನಿಂಗ್ಸ್ 3 ವಿಕೆಟ್ ಗೆ 204

loading...