ಸಮಸ್ಯೆ ಇತ್ಯರ್ಥಕ್ಕೆ ರೈತರು ಒಗ್ಗಟ್ಟು ಪ್ರದರ್ಶಿಸಿ: ಗುರುಸಿದ್ದ ಶ್ರೀ

0
37

ರಾಷ್ಟಿçÃಯ ರೈತ ದಿನಾಚರಣೆ ಸಮಾವೇಶ ಕರ‍್ಯಕ್ರಮ

ಸಮಸ್ಯೆ ಇತ್ಯರ್ಥಕ್ಕೆ ರೈತರು ಒಗ್ಗಟ್ಟು ಪ್ರದರ್ಶಿಸಿ: ಗುರುಸಿದ್ದ ಶ್ರೀ

ಬೆಳಗಾವಿ: ರೈತ ಸಂಘಟನೆಗಳ ನಿರಂತರ ಹೋರಾಟಗಳಿಂದ ಆಯಾ ಸಮಯದಲ್ಲಿ ತಾತ್ಕಾಲಿಕವಾಗಿ ಕೆಲ ಸಮಸ್ಯೆಗಳು ಬಗೆ ಹರಿದಿವೆ. ಆದರೆ, ಶಾಸ್ವತವಾಗಿ ಬಗೆಹರಿಯಬೇಕಾದ. ಇನ್ನು ಹತ್ತು ಹಲವು ಸಮಸ್ಯೆಗಳು ಉಳಿದುಕೊಂಡಿವೆ. ಸಮಸ್ಯೆಗಳ ನಿವಾರಣೆಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ. ದೇಶಕ್ಕೆ ಅನ್ನ ನೀಡುವ ರೈತರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಒಗ್ಗಟ್ಟು ಪ್ರದರ್ಶಿಬೇಕು ಎಂದು ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮೀಜಿಗಳು ಸಲಹೆ ನೀಡಿದ್ದಾರೆ.
ರೈತ ನಾಯಕ ದಿ. ಚೌಧರಿ ಚರಣಸಿಂಗ್ ಅವರ ೧೧೭ ನೇ ಜನ್ಮ ದಿನದ ಪ್ರಯುಕ್ತ ಭಾರತೀಯ ಕೃಷಿಕ ಸಮಾಜ(ಸಂ) ದ ವತಿಯಿಂದ ಸೋಮವಾರದಂದು ನಗರದ ಮಹಾಂತ ಭವನದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ರೈತ ದಿನಾಚರಣೆ ಹಾಗೂ ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ, ಸಂಘಟನೆಯ ವತಿಯಿಂದ ಚೌಧರಿ ಚರಣಸಿಂಗ್ ಅವರ ಸವಿ ನೆನಪಿಗಾಗಿ ಹೊರ ತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಿ, ಅವರು ಮಾತನಾಡಿದರು.
ಈ ಆಧುನಿಕ ಯುಗದಲ್ಲಿ ರೈತರ ಸಮಸ್ಯೆಗಳು ಬಗೆ ಹರಿಯುವದರ ಬದಲು ಹೊಸ ಹೊಸ ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗುತ್ತಿರುವದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಒಂದೆಡೆಯಾದರೆ, ಸರಕಾರಗಳ ತಪ್ಪು ನೀತಿಗಳಿಂದ ರೈತರು ತೊಂದರೆಗೆ ಸಿಲುಕುತ್ತಿದ್ದಾರೆ. ರೈತರ ಆತ್ಮಹತ್ಯೆ ಸಾಮಾನ್ಯ ಎಂಬAತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತಿರುವದರಿಂದ ರೈತ ನಾಯಕರು ಹೋರಾಟಗಳಿಗೆ ಹೊಸ ಆಯಾಮ ನೀಡಬೇಕು ಎಂದರು.

ಎಸ್.ಡಿ.ಕುಲಕರ್ಣಿ, ಇಫ್ಕೋ ಕಂಪನಿಯ ಸಿ. ನಾರಾಯಣ ಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಜಯಪ್ಪ ಬಸರಕೋಡ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್.ದರ್ಗೆ ಸ್ವಾಗತಿಸಿದರು. ಸೌಮ್ಯ ಗೌಡ ನಿರೂಪಿಸಿದರು. ಸುರೇಶ ಮರಲಿಂಗಣ್ಣವರ

loading...