ಬೆಳಗಾವಿ ಸ್ಮಾರ್ಟ್ ಸಿಟಿಗೆ ರಾಷ್ಟ್ರೀಯ ಪ್ರಶಸ್ತಿ ಗರಿ

0
9

ಬೆಳಗಾವಿ ಸ್ಮಾರ್ಟ್ ಸಿಟಿಗೆ ರಾಷ್ಟ್ರೀಯ ಪ್ರಶಸ್ತಿ ಗರಿ

ಬೆಳಗಾವಿ
ಬೆಳಗಾವಿ ಸ್ಮಾರ್ಟ್ ಸಿಟಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿರುವ ಎಜುಕೇಶನ್ ಪ್ರೊಜೆಕ್ಟ್ ಗೆ ರಾಷ್ಟ್ರಮಟ್ಟದಲ್ಲಿ ಬೆಸ್ಟ್ ಸ್ಮಾರ್ಟ್ ಎಜುಕೇಶನ್ ಪ್ರೊಜೆಕ್ಟ್ ಪ್ರಶಸ್ತಿ ಲಭಿಸಿದೆ.

ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಕೊಡಮಾಡುವ, ಸ್ಮಾರ್ಟ್ ಸಿಟಿ ಎಂಪವರಿಂಗ್ ಇಂಡಿಯಾ ಅವಾರ್ಡ್ಸ್ -2019 ಪ್ರಸ್ತುತ ಪಡಿಸುವ ಬೆಸ್ಟ್ ಸ್ಮಾರ್ಟ್ ಎಜುಕೇಶನ್ ಪ್ರೊಜೆಕ್ಟ್ ಅವಾರ್ಡ್ಸ್ ಬೆಳಗಾವಿ ಸ್ಮಾರ್ಟ್ ಸಿಟಿಯ ಹೈಟೆಕ್ ಕ್ಲಾಸ್ ರೂಂ ಪ್ರೊಜೆಕ್ಟ್ ಗೆ ಸಿಕ್ಕಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವ ಹರಿದೀಪ್ ಸಿಂಗ್ ಪುರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜನೆವರಿ 10ರಂದು ನವದೆಹಲಿಯ ಲಲಿತ್ ಹೊಟೆಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಐವರು ಪ್ರತಿನಿಧಿಗಳು ಭಾಗವಹಿಸಲು ಅವಕಾಶವಿದೆ.

ಆರಂಭದಲ್ಲಿ ಯೋಜನೆ ಅನುಷ್ಠಾನದಲ್ಲಿ ವಿಳಂಬದಿಂದಾಗಿ ಟೀಕಗೆ ಒಳಗಾಗಿದ್ದ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗಳು ಈಗ ವೇಗ ಪಡೆದಿದ್ದು, ಇನ್ನು 6 ತಿಂಗಳಲ್ಲಿ ಮೊದಲ ಹಂತದ ಕಾಮಗಾರಿಗಳು ಸಂಪೂರ್ಣವಾಗಲಿವೆ. ಇದೀಗ ಅವಾರ್ಡ್ ಕೂಡ ಲಭಿಸಿರುವುದು ಬೆಳಗಾವಿಯ ಹೆಮ್ಮೆಯಾಗಿದೆ.

loading...