ಬ್ಯಾಂಕ್, ಉಸುಕು ಕೊಡುವವರು ಫಲಾನುಭವಿಗಳಿಗೆ ಒಂದು ತಿಂಗಳಲ್ಲಿ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು: ಕೇಂದ್ರ ಸಚಿವ ಅಂಗಡಿ

0
40

ಬೆಳಗಾವಿ

ಬ್ಯಾಂಕ್, ಉಸುಕು ಕೊಡುವವರು ಫಲಾನುಭವಿಗಳಿಗೆ ಒಂದು ತಿಂಗಳಲ್ಲಿ ಮನೆ ನಿರ್ಮಾಣ ಮಾಡುಕೊಡಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.

ಶುಕ್ರವಾರ ಜಿಪಂ ಸಂಭಾಗಣದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ ( ಗ್ರಾ)ಯ ಫಲಾನಿಭವಿಗಳ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು. ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ ನಿವೇಶನ ಕಟ್ಟಿಕೊಳ್ಳುವವರಿಗೆ ಉಸುಕು ಹಾಗೂ ಬ್ಯಾಂಕ್ ಅಧಿಕಾರಿಗಳು ಒಂದು ತಿಂಗಳಲ್ಲಿ ಅವರಿಗೆ ಮನೆ ಸಂಪೂರ್ಣ ‌ನಿರ್ಮಾಣ ಮಾಡಿಕೊಡುವಂತೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.

ಜಿಪಂ ಸಿಇಒ ರಾಜೇಂದ್ರ ಕೆ.ವಿ.ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿರಬೇಕು. ಗುಡಿಸಲಿನ ಇರಬಾರದು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ. ರಾಜ್ಯ ಸರಕಾರದಿಂದಲೂ ಸಾಕಷ್ಟು ಯೋಜನೆಗಳು ರೂಪಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ವಸತಿ ಯೋಜನೆಗಳು ಜಾರಿಯಲ್ಲಿವೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮನೆ ನಿರ್ಮಾಣ ಮಾಡಲು ಸಾವಿರಾರು ಕಾರಣ ಹೇಳಿ ಮನೆ ಕಟ್ಟುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ವರ್ಷಕ್ಕೆ 1 ಲಕ್ಷ 60 ಸಾವಿರ ರು. ಅವರಿಗೆ ನೀಡುತ್ತಿದ್ದೇವೆ. ಆದರೆ ಮನೆ ನಿರ್ಮಿಸಿಕೊಳ್ಳು ಫಲಾನುಭವಿಗಳಿಗೆ ಸಾಧ್ಯವಾಗುತ್ತಿಲ್ಲ. ಆಡಳಿತ ಮಟ್ಟದಲ್ಲಿ ಅವರಿಗೆ ತಿಳುವಳಿಕೆ ನೀಡಿದರು ಸಕಾಲದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಏಜೆನ್ಸಿಯ ಮೂಲಕ ಮನೆ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 70 ಸಾವಿರ ಲೋನ್ ನೀಡಲಾಗುತ್ತಿದೆ. ಮೊದಲ ಕಂತಿನಲ್ಲಿ ನಿವೇಶ ನಿರ್ಮಾಣ ಮಾಡುವ ಸಾಮಗ್ರಿಗಳ‌ ಖರೀದಿಗೆ ಜಿಪಂ ಸಹಾಯ ಮಾಡುತ್ತದೆ ಎಂದು ಹೇಳಿದರು.

ಗೃಹ ಮಿತ್ರ ಯೋಜನೆಯಲ್ಲಿ ಅರ್ಹ ಫಲಾನುಭವಿಗಳು ಮನೆಗಳನ್ನು ಸಂಪೂರ್ಣ ನಿರ್ಮಿಸಿ ಗೃಹ ಪ್ರವೇಶ ಆಗುವವರೆಗೂ ಅಧಿಕಾರಿಗಳು ನಿರಂತರವಾಗಿ ಫಲಾನುಭವಿಗಳ ಸಂಪರ್ಕದಲ್ಲಿರಬೇಕೆಂದು ಸೂಚನೆ ನೀಡಿದರು.

ಕಳೆದ ನಾಲ್ಕೈದು ತಿಂಗಳು ಹಿಂದೆ ಬಂದ ಪ್ರವಾಹದಿಂದ ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರಿಗೂ ಸಹ ಮನೆ ನಿರ್ಮಾಣ ಮಾಡಿಕೊಡಬೇಕು. ಗುಡಿಸಲು ಮುಕ್ತ ಬೆಳಗಾವಿ ಮಾಡಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಮರುಳಿಗೆ ಕಷ್ಟ ಪಡುವ ಬದಲಾಗಿ ಫಲಾನುಭವಿಗಳಿಗೆ ಅಧಿಕಾರಿಗಳು ಎಂ ಸ್ಯಾಡ್ ಬಳಕೆಯ ಮಾಡುವಂತೆ ಮನವರಿಕೆ ಮಾಡಿಕೊಡಬೇಕೆಂದರು.

loading...