ಬೆಳಗಾವಿ ಶಕ್ತಿಸೌಧಕ್ಕೆ ಶೀಘ್ರದಲ್ಲೇ ಪ್ರಮುಖ ಕಚೇರಿ ಸ್ಥಳಾಂತರ: ಸಚಿವ ಈಶ್ವರಪ್ಪ ‌ಭರವಸೆ

0
17

ಬೆಳಗಾವಿ: ಉತ್ತರ ಕರ್ನಾಟಕ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಸರಕಾರಿ ಕಚೇರಿ ಸ್ಥಳಾಂತರ ಮಾಡಲು ನಾಳೆ (ಮಂಗಳವಾರ) ಬೆಂಗಳೂರಿನ ಸಭೆಯಲ್ಲಿ ಚರ್ಚಿಸಿ ಇಲಾಖೆಯ ಕಚೇರಿಯ ಸ್ಥಳಾಂತರ ಕುರಿತು ತೀರ್ಮಾನ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ಜನರ ಸಮಸ್ಯೆಯನ್ನು ಬಗೆಹರಿಸಲು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲಾಯಿತು. ಈ ಭಾಗದ ಬಹು ವರ್ಷಗಳ ಬೇಡಿಕೆಯಾಗಿರು ಪ್ರಮುಖ ಸರಕಾರಿ ಕಚೇರಿ ಸ್ಥಳಾಂತರ ಮಾಡಲು ಅಗತ್ಯವಿರುವ ಕನಿಷ್ಠ ಕೊಠಡಿಗಳನ್ನು ನೀಡಲು ಸಭಾಧ್ಯಕ್ಷರಿಗೆ ವಿನಂತಿಸಿಕೊಳ್ಳಲಾಗುವುದು. ಉತ್ತರ ಕರ್ನಾಟಕದ ಜನರಿಗೆ ಅನುಕೂಲ ಕಲ್ಪಿಸಲು ಶೀಘ್ರಸಲ್ಲೇ ಕಚೇರಿ ಆರಂಭಿಸಲಾಗುವುದು ಎಂದರು.
ಗಡಿ, ಭಾಷೆ ಹಾಗೂ ಜಲ ವಿವಾದವನ್ನು ಕೆಲವರು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ
ನೆಲ-ಜಲ ಹಿತರಕ್ಷಣೆ ರಾಜೀ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾಡದ್ರೋಹ ಕೆಲಸ ದೇಶದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿವೆ. ಕೆಲವು ವ್ಯಕ್ತಿ ಮತ್ತು ಸಂಘಟನೆಗಳಿಂದ ಗಡಿ ವಿವಾದ ಕೆಣಕುವ ಕೆಲಸ ಮಾಡುತ್ತವೆ ಎಂದು ಪರೋಕ್ಷವಾಗಿ ಶಿವಸೇನೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವ ಕಾಯ್ದೆ ತಿದ್ದುಪಡಿಯ ಉದ್ಧೇಶ ನೆರೆಯ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು.
ಜೀವ ಬೆದರಿಕೆಗೆ ಹೆದರಲ್ಲ. ಈಗಾಗಲೇ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

loading...