ಇರಾನ್, ಐಸಿಸ್ ಬಗ್ಗೆ ಫ್ರೆಂಚ್ ವಿದೇಶಾಂಗ ಸಚಿವರ ಜೊತೆ ಪಾಂಪಿಯೋ ಮಾತುಕತೆ

0
13

ವಾಷಿಂಗ್ಟನ್-  ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಇರಾನ್‌ನ ‘ದುರುದ್ದೇಶಪೂರಿತ ಚಟುವಟಿಕೆಗಳನ್ನು’ ಎದುರಿಸಲು ಇರಾಕ್‌ನಲ್ಲಿನ ಪ್ರಯತ್ನಗಳ ಬಗ್ಗೆ ಫ್ರೆಂಚ್ ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯಾನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
“ಫ್ರೆಂಚ್ ಸಚಿವ ಜೆವೈ ಲಿ ಡ್ರಿಯನ್ ಮತ್ತು ನಾನು ಇರಾಕ್ ನಲ್ಲಿ ಐಸಿಸ್ ತೊಡೆದುಹಾಕಲು  ಮುಂದುವರಿದ ಅಮೆರಿಕ ಮತ್ತು ಯುರೋಪಿಯನ್ ಪ್ರಯತ್ನಗಳ ಪ್ರಾಮುಖ್ಯತೆ ಮತ್ತು ಇರಾನ್ ನ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಗ್ರಹಿಸಲು ಸಹಕಾರದ ಬಗ್ಗೆ ಚರ್ಚಿಸಿದ್ದೇವೆ” ಎಂದು ಪೊಂಪಿಯೊ ಟ್ವೀಟ್ ಮಾಡಿದ್ದಾರೆ.
ಐಎಸ್ಐಎಸ್ ವಿರುದ್ಧ ಹೋರಾಡಲು ಇರಾಕ್ ನಲ್ಲಿ ಒಕ್ಕೂಟದ ಮಿಲಿಟರಿ ಉಪಸ್ಥಿತಿಯ ಅಗತ್ಯತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಜನವರಿ 3 ರಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್-ಕುಡ್ಸ್ ಫೋರ್ಸ್‌ನ ಮುಖ್ಯಸ್ಥ ಜನರಲ್ ಕಾಸೆಮ್ ಸೊಲೈಮಾನಿಯನ್ನು ಅಮೆರಿಕ ಕೊಂದ ನಂತರ ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇರಾಕ್‌ನಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿತು. ಈ ಪ್ರಕ್ರಿಯೆಯಲ್ಲಿ, ಉಕ್ರೇನಿಯನ್ ಜೆಟ್ಲೈನರ್ ಅನ್ನು ಹೊಡೆದುರುಳಿಸುವ ಉದ್ದೇಶ ಹೊಂದಿಲ್ಲದೇ ಇದ್ದರು ಇರಾನ್ ದಾಳಿಗೆ ಇದು ಸಿಲುಕಿ ಅದರಲ್ಲಿದ್ದ ಎಲ್ಲ 176 ಜನರು ಸಾವನ್ನಪ್ಪಿದ್ದರು

loading...