ಜ.18ಕ್ಕೆ ಗಾಳಿಯಲ್ಲಿ ಹಾರಾಡಲಿದೆ ಆನೆ: ಶಾಸಕ ಅಭಯ

0
34

ಬೆಳಗಾವಿ

 

ಬೆಳಗಾವಿ
ಬೆಳಗಾವಿಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಆವರಣದಲ್ಲಿ ನಡೆಯುವ 10ನೇ ಅಂತರಾಷ್ಟ್ರೀಯ ಪತಂಗೋತ್ಸವದಲ್ಲಿ 15ರಿಂದ 20 ಅಡಿ ಆನೆಯ ಪತಂಗೋತ್ಸವ ಜನರನ್ನು ರಂಜಿಸಲಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

25 ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಭಾಗಿಯಾದವರು. ಈಗಾಗಲೇ ವಿವಿಧ ದೇಶಗಳ ಪತಂಗೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಸಲದ ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ನಾನಾ ಬಗೆಯ ಪತಂಗಗಳು ಜನರನ್ನು ರಂಜಿಸಲಿದೆ ಎಂದರು.

ಬೆಳಗಾವಿಗೆ ಗೋವಾ, ಕೊಲ್ಲಾಪುರ, ಮಹಾರಾಷ್ಟ್ರದ ಜನರು ಈ ಪತಂಗೋತ್ಸವದಲ್ಲಿ ಕಣ್ಮತುಂಬಿಕೊಳ್ಳಲಿದ್ದಾರೆ. ಯಾವುದೇ ಸರಕಾರದ ಸಹಾಯವಿಲ್ಲದೆ ಸ್ವತಃ ಖರ್ಚಿನಲ್ಲಿ ಅಂತಾರಾಷ್ಟ್ರೀಯ ಪತಂಗೋತ್ಸವ ಆಯೋಜಿಸುತ್ತ ಬಂದಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅಂತಾರಾಷ್ಟ್ರೀಯ ಪತಂಗೋತ್ಸವಕ್ಕೆ 50 ಲಕ್ಷ ರು.‌ನೀಡುವಂತೆ ವಿನಂತಿಸಿದ್ದೇವು. ಆದರೆ ನೀಡಲಿಲ್ಲ. ಅಂತಾರಾಷ್ಟ್ರೀಯ ಪತಂಗೋತ್ಸವ ದೇಶದ ನಾಲ್ಕು ಕಡೆಗಳಲ್ಲಿ ನಡೆಯುತ್ತದೆ‌. ಅದರಲ್ಲಿ ಬೆಳಗಾವಿಯೂ ಒಂದು ಎಂದರು.

loading...