ಗಣರಾಜ್ಯೋತ್ಸವ ಆಗಮನಕ್ಕೂ ಮೊದಲೇ ಇಂಫಾಲ್‌ನಲ್ಲಿ ಅವಳಿ ಸ್ಫೋಟ

0
1

ಇಂಫಾಲ್,-ಗಣರಾಜ್ಯೋತ್ಸವ ಸಮೀಪಿಸುತ್ತಿರುವಂತೆಯೇ ನಗರದ ಹೃದಯ ಭಾಗದಲ್ಲಿ ಇಂದು ಅವಳಿ ಸ್ಫೋಟ ಸಂಭವಿಸಿದೆ.
ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ರಿಮ್ಸ್‌ ರಸ್ತೆಯಲ್ಲಿ ಏಕಕಾಲದಲ್ಲಿ ಅವಳಿ ಐಇಡಿ ಸ್ಫೋಟ ಸಂಭವಿಸಿದೆ. ಆದಾಗ್ಯೂ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಐಇಡಿ ಸ್ಫೋಟ ಪ್ರಬಲವಾಗಿದ್ದು, ಸ್ಫೋಟದ ಶಬ್ಧ ಬಹಳ ದೂರದವರೆಗೆ ಕೇಳಿಬಂದಿದೆ.
ರಸ್ತೆ ಬದಿಯಲ್ಲಿದ್ದ ಹಲವು ಅಂಗಡಿಗಳಿಗೆ ಭಾರೀ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಇಂಫಾಲ್ ಪಶ್ಚಿಮ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭಾರೀ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪೊಲೀಸರು ನಿಯಮಿತವಾಗಿ ವಿವಿಧ ಸ್ಥಳಗಳಲ್ಲಿ ಜನರ ಗುರುತುಗಳನ್ನು ಪರಿಶೀಲಿಸುತ್ತಿದ್ದಾರೆ.
ಎಲ್ಲೆಡೆ ಅಲರ್ಟ್‌ ಘೋಷಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ವಾಹನಗಳ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಜನನಿಬಿಡ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಗಣರಾಜ್ಯೋತ್ಸವದ ಮೆರವಣಿಗೆಯ ಮಾರ್ಗದ ಬಳಿ ಪೊಲೀಸರು ಹೊಸ ಸಂಚಾರ ನಿಯಮಗಳನ್ನು ಪ್ರಕಟಿಸಿದ್ದಾರೆ.

loading...