ಹೆಲ್ಮೇಟ್ ಕಡ್ಡಾಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

0
10

ನರಗುಂದ: ರಸ್ತೆ ಸುರಕ್ಷಾ ಅಭಿಯಾನದ ಪ್ರಯುಕ್ತ ನರಗುಂದ ಪೋಲಿಸರಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹೆಲ್ಮೇಟ್ ಕಡ್ಡಾಯ ಜಾಗೃತಿ ಕಾರ್ಯಕ್ರಮದ ಬೈಕ್ ರ‍್ಯಾಲಿಗೆ ಗಣಿ,ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಬುಧವಾರ ಚಾಲನೆ ನೀಡಿದರು.
ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವರ್ತುಲ, ಚನ್ನಮ್ಮ ವರ್ತುಲ, ಸೋಮಾಪೂರ, ದಂಡಾಪೂರ ಬಡಾವಣೆ, ಜವಳಿ ಬಜಾರ, ತರಕಾರಿ ಮಾರುಕಟ್ಟೆ, ಗಾಂಧಿ ಸರ್ಕಲ್, ಟಿಪ್ಪುಸುಲ್ತಾನ ಸರ್ಕಲ್ ಸೇರಿ ಪುರಸಭೆಯ ಪ್ರಮುಖ ಬೀದಿಗಳಲ್ಲಿ ಜಾಗೃತಿ ರ‍್ಯಾಲಿ ಕಾರ್ಯಕ್ರಮ ಜರುಗಿತು.
ತಹಸೀಲ್ದಾರ ಎ.ಎಚ್.ಮಹೇಂದ್ರ, ಸಿಪಿಐ ಡಿ.ಬಿ.ಪಾಟೀಲ, ಎಎಸ್‌ಐಗಳಾದ ವಿ.ಜಿ.ಪವಾರ, ಆರ್.ಎಂ.ಚನ್ನಶೆಟ್ಟಿ, ಬಿ.ಆರ್.ಸೊರಟೂರ, ಪೇದೆಗಳಾದ ಎಸ್.ಆರ್.ರಾಯನಗೌಡ್ರ, ಸಂತೋಷ ಡೋಣಿ, ಸಿ.ಬಿ.ಹಿರೇಗೌಡ್ರ, ಕೆ.ಟಿ.ಕಟ್ಟಿಮನಿ, ಎಸ್.ಎಂ.ತೆಗ್ಗಿ, ಎಫ್.ಎಂ.ಗೋಡಿ, ಎಸ್.ಎಸ್.ಕಾಶಪ್ಪಯ್ಯನಮಠ, ಎಸ್.ಎಂ.ಗುಗ್ಗರಿ, ಎಂ.ವೈ. ಸುಣಗದ, ಎಂ.ಎನ್.ಶೀಲವAತರ, ಜೆ.ಬಿ.ಕುರಹಟ್ಟಿ, ಸುರೇಶ ಚೆಟ್ರಿ, ಯು.ಎಫ್.ಸುಣಗಾರ, ಎಂ.ಎA. ಮಾದರ, ಆರ್.ಎಸ್.ಹೂಗಾರ, ಎಸ್.ಪಿ.ಶಾಂತಪ್ಪನವರ, ಸುಜಾತಾ ಮಳಲಿ, ರಾಜೂಗೌಡ ಪಾಟೀಲ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

loading...