ಸಾಮಾಜಿಕ ಜಾಲತಾಣ ಜನರ ಅಭಿವೃದ್ಧಿಗೆ ಪೂರಕವಾಗುವಂತಿರಲಿ: ಜವಳಿ

0
21

ಮುಂಡರಗಿ: ಸಾಮಾಜಿಕ ಜಾಲತಾಣಗಳ ವಾಟ್ಸ್ಅಪ್, ಫೇಸ್‌ಬುಕ್ ಮೊದಲಾದವುಗಳನ್ನು ಇಂದು ಎಲ್ಲ ವರ್ಗದ ಜನರು ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಜನರ ಅಭಿವೃದ್ಧಿಗೆ ಪೂರಕವಾಗುವಂತೆ ಬಳಸಬೇಕು ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಹೇಳಿದರು.
ಪಟ್ಟಣದ ಕೆ.ಆರ್.ಬೆಲ್ಲದ ಮಹಾವಿದ್ಯಾಲಯದಲ್ಲಿ ರಾಷ್ಟಿçÃಯ ಸೇವಾ ಯೋಜನಾ ಘಟಕ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಹಾಗೂ ಕಾಲೇಜ್‌ನ ಎನ್‌ಎಸ್‌ಎಸ್ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ‘ಸಾಮಾಜಿಕ ಜಾಲತಾಣಗಳು ಯುವಕರ ಅಭಿವೃದ್ಧಿಗೆ ಪೂರಕವೇ?’ ಎಂಬ ವಿಷಯ ಕುರಿತು ಸೋಮವಾರ ಏರ್ಪಡಿಸಿದ್ದ ಗದಗ ಜಿಲ್ಲಾ ಮಟ್ಟದ ಚರ್ಚಾಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳಿಂದ ಸಕಾರಾತ್ಮಕ ವಿಷಯಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಅವಶ್ಯವಿರುವಷ್ಟು ಜಾಲತಾಣವನ್ನು ಬಳಸಿಕೊಂಡು ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಎಸ್.ಆರ್.ಬಸಾಪೂರ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ಬಳಸಿಕೊಂಡರೆ ಯುವಕರಿಗೆ ಅನುಕೂಲವಾಗುತ್ತದೆ. ಇಂತಹ ಚರ್ಚಾ ಸ್ಪರ್ಧೆಗಳಿಂದ ತಮಗೆ ಗೊತ್ತಿರದ ಅದೆಷ್ಟೋ ವಿಷಯ ತಿಳಿಬರುತ್ತದೆ ಎಂದರು.
ತೀರ್ಪುಗಾರರಾಗಿ ಆಗಮಿಸಿದ್ದ ಪತ್ರಕರ್ತರಾದ ಹುಬಾ.ವಡ್ಡಟ್ಟಿ,ಸಂತೋಷ ಮುರಡಿ, ಕಾಶೀನಾಥ ಬಿಳಿಮಗ್ಗದ, ಸಿ.ಕೆ.ಗಣಪ್ಪನವರ ಮಾತನಾಡಿದರು. ಉಪನ್ಯಾಸಕರಾದ ಶ್ರೀಮತಿ ಎ.ಎಸ್.ಕಲ್ಯಾಣಿ, ಡಾ.ಸಚಿನ್ ಉಪ್ಪಾರ, ಡಾ.ವನಜಾಕ್ಷಿ ಭರಮಗೌಡ್ರ, ಹನುಮಂತಪ್ಪ ಎನ್, ಸಂಗೀತಾ ಮರಳಿ, ಸಂತೋಷ ಹಿರೇಮಠ, ಡಾ.ಜಯಕುಮಾರ ಜೆ., ಮನೋಜ್ ಕೋರಪಡೆ, ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನ್ನಪೂರ್ಣ ಜವಳಿ ಪ್ರಾರ್ಥಿನಿಸಿದರು. ಕಾಲೇಜ್‌ನ ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಆರ್.ಎಚ್.ಜಂಗಣವಾರಿ ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ: ಚರ್ಚಾ ಸ್ಪರ್ಧೆಯಲ್ಲಿ ಗದಗಿನ ಶ್ರೀ ಬಸವೇಶ್ವರ ಪದವಿ ಕಾಲೇಜ್‌ನ ರೇಷ್ಮಾ ದೊಡ್ಡಮನಿ (ಪ್ರಥಮ), ಗದಗಿನ ಜೆ.ಟಿ.ಪದವಿ ಕಾಲೇಜ್‌ನ ಪೂಜಾ ನಾಗಲೋಟಿ (ದ್ವಿತೀಯ) ಹಾಗೂ ಮುಂಡರಗಿಯ ಕ.ರಾ.ಬೆಲ್ಲದ ಕಾಲೇಜ್‌ನ ಪ್ರಕಾಶ ಭಂಡಾರಿ (ತೃತೀಯ) ಸ್ಥಾನ ಪಡೆದುಕೊಂಡರು.

loading...