ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಂಭ್ರಮ

0
2

ಹ್ಯಾಮಿಲ್ಟನ್:- ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು.

ತಮ್ಮ ನೈಜ ಆಟವಾಡಿದ ಶ್ರೇಯಸ್ ಅಬ್ಬರಿಸಿದರು. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಕ್ಷಮತೆ ಇದೆ ಎಂದು ಅವರು ಸಾಬೀತು ಮಾಡಿದ್ದಾರೆ. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಳಸಿಕೊಂಡು ಆರ್ಭಟಿಸಿದ್ದಾರೆ. ಡಿಸೆಂಬರ್ 10, 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಎಡವಿದರು. ಇನ್ನು ಮೊಹಾಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶ್ರೇಯಸ್ 88 ರನ್ ಬಾರಿಸಿದ್ದರು. ಆಡಿದ 16 ಪಂದ್ಯಗಳಲ್ಲಿ ಆರು ಅರ್ಧಶತಕ, ಒಂದು ಶತಕ ಬಾರಿಸಿದ್ದಾರೆ.

ಶ್ರೇಯಸ್ ಅಯ್ಯರ್ 101 ಎಸೆತಗಳಲ್ಲಿ 11 ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ ಮೂರಂಕಿ ಮುಟ್ಟಿದರು. ಇದು ಅಯ್ಯರ್ ಅವರ ಏಕದಿನ ಅಂತಾರಾಷ್ಟ್ರೀಯನಲ್ಲಿ ಚೊಚ್ಚಲ ಶತಕವಾಗಿದೆ.

ಹಂತ ಹಂತವಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದ ಶ್ರೇಯಸ್ ನಾಲ್ಕನೇ ಸ್ಥಾನಕ್ಕೆ ತಾನು ಸೂಕ್ತ ಎಂಬುದನ್ನು ಸಾಬೀತು ಪಡೆಸುವಂತೆ ಬ್ಯಾಟ್ ಮಾಡಿದರು. ಎರಡು ಜೀವದಾನಗಳ ಲಾಭ ಪಡೆದ ಶ್ರೇಯಸ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅಂತಿಮವಾಗಿ ಶ್ರೇಯಸ್ 103 ಎಸೆತಗಳಲ್ಲಿ ಟೀಮ್ ಸೌಥಿ ಎಸೆತದಲ್ಲಿ ಔಟ್ ಆದರು.

loading...