ಹಾಲಿವುಡ್ ಸುವರ್ಣಯುಗದ ಕೊನೆಯ ಸೂಪರ್ ಸ್ಟಾರ್ ಕಿರ್ಕ್ ಡಗ್ಲಾಸ್ ಇನ್ನಿಲ್ಲ

0
14

 

ಲಾಸ್ ಏಂಜಲೀಸ್:- ಹಾಲಿವುಡ್ ಸಿನಿಮಾ ರಂಗ ಸುವರ್ಣಯುಗದ ಕೊನೆಯ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿದ್ದ ಹಿರಿಯ ನಟ ಕಿರ್ಕ್ ಡಗ್ಲಾಸ್ ಬುಧವಾರ ನಿಧನರಾಗಿದ್ದಾರೆ. ಅವರಿಗೆ ೧೦೩ ವರ್ಷ ವಯಸ್ಸಾಗಿತ್ತು.
ಕಿರ್ಕ್ ಡಗ್ಲಾಸ್ ಅವರ “ಸ್ಪಾರ್ಟಕಸ್” ಮತ್ತು “ಪಾಥ್ಸ್ ಆಫ್ ಗ್ಲೋರಿ” ಚಿತ್ರಗಳ ಅವರ ಅಭಿನಯ ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.
ಆರು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಸುಮಾರು ೧೦೦ ಚಲನಚಿತ್ರಗಳಲ್ಲಿ ನಟಿಸಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ಪಾಶ್ವವಾಯುವಿಗೆ ಒಳಗಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಬೆವರ್ಲಿ ಹಿಲ್ಸ್‌ನಲ್ಲಿರುವ ನಿವಾಸದಲ್ಲಿ ತಂದೆ ಕಿರ್ಕ್ ಡಗ್ಲಾಸ್ ಅವರು ನಿಧನರಾಗಿರುವುದನ್ನು ಪುತ್ರ ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಅವರ ಮೈಕೆಲ್ ಖಚಿತಪಡಿಸಿದ್ದಾರೆ.

loading...