ಬೆಳಗಾವಿ ನೂತನ ಪತ್ರಕರ್ತರ ಸಂಘ ಉದ್ಘಾಟಿಸಿದ ಡಿಸಿ

0
74

ಬೆಳಗಾವಿ
ಸಮಾಜಮುಖಿ ವರದಿಗಳಿಗಾಗಿ ಹಿರಿಯ ಪತ್ರಕರ್ತರು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಅವರು ಶುಕ್ರವಾರ ನಗರದ ವಾರ್ತಾ ಭವನದಲ್ಲಿ ನಡೆದ ಬೆಳಗಾವಿ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರದಿಗಾರರು ಬರೆಯುವ ವರದಿಗಳೆಲ್ಲ ಸತ್ಯವಾದದು ಅಲ್ಲ. ಅಲ್ಪ ಸ್ವಲ್ಪ ಸತ್ಯವಾಗಿರುತ್ತವೆ. ಆ ವರದಿಯನ್ನು ಪೂರ್ಣ ಸತ್ಯಕ್ಕೆ ಯಾವ ರೀತಿ ಬರೆಯಬೇಕು ಎನ್ನುವುದಕ್ಕೆ ಹಿರಿಯ ಪತ್ರಕರ್ತರು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದರೆ ಉತ್ತಮವಾಗಿರುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಪತ್ರಕರ್ತರ ಕೆಲಸ ಪರಿಶ್ರಮದ ಕೆಲಸವಾಗಿದೆ. ಕಠಿಣ ಸಂದರ್ಭಗಳಲ್ಲಿ ವರದಿಯನ್ನು ಮಾಡುವ ಪತ್ರಕರ್ತರಿಗೆ ಸರ್ಕಾರಗಳ ಅನುಕಂಪ ಕಡಿಮೆ. ಪತ್ರಕರ್ತರ ಬಗ್ಗೆ ಸಮಾಜ ಹಾಗೂ ಸರ್ಕಾರಗಳು ಯೋಚಿಸಬೇಕಾಗಿದೆ. ವರದಿಗಾರರಿಗೆ ಗೌರವ ನೀಡಬೇಕು ಎಂದರು.
ಕೆಲವು ಜನ ಪತ್ರಕರ್ತರು ತಪ್ಪು ದಾರಿ ತುಳಿಯುತ್ತಿರುವುದ್ದರಿಂದ ಎಲ್ಲ ಪತ್ರಕರ್ತರ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿದೆ. ಪ್ರಚಾರಕ್ಕೆ ಮತ್ತು ಹಣಕ್ಕಾಗಿ ವರದಿಯನ್ನು ಮಾಡಬಾರದು ಎಂದು ಶ್ರೀಗಳು ಕಿವಿ ಮಾತು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರು ಕಾರ್ಯಕ್ರಮ ಕುರಿತು ಮಾತನಾಡಿದರು.
ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಯಣ್ಣ ಆರ್.ಸಿ., ಸುನೀಲ ಪಾಟೀಲ, ಮಲ್ಲಿಕಾರ್ಜುನ ಮುಗಳಿ, ಸುರೇಶ ನೇರ್ಲಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂತಿನಾಥ ಕಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ವಿಜಾಪೂರ ಸ್ವಾಗತಿಸಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಕಾಸರಗೋಡ ವಂದಿಸಿದರು.

loading...