0
4

‘ಅಂತರಾಷ್ಟಿçÃಯ ಮಾತೃಭಾಷಾ ದಿನಾಚರಣೆ ’ ಕಾರ್ಯಕ್ರಮಲ್ಲಿ ಹೇಳಿಕೆ
ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ : ಡಾ. ಹಿಮ್ಮಡಿ
ಬೆಳಗಾವಿ: “ಅಕ್ಷರಗಳ ಹಂಗಿಲ್ಲದೇ ಮೌಖಿಕವಾಗಿ ತಾಯಿ ತನ್ನ ಮಗುವಿಗೆ ಕಲಿಸುವ ಭಾಷೆಯೇ ಮಾತೃ ಭಾ಼ಷೆ. ಹೀಗೆ ಕಲಿತ ಭಾಷೆಯಿಂದಲೇ ಮಗು ತನ್ನ ಭಾವನೆಗಳನ್ನು ಸಂಪೂರ್ಣವಾಗಿ ಹಂಚಿಕೊಳ್ಳಲು ಹಾಗೂ ಹೊಸತನ್ನು ಕಲಿಯಲು ಸಾಧ್ಯ. ಹೀಗಾಗಿ ಪ್ರತಿ ಮಗುವಿಗೆ ಕನಿಷ್ಠ ಕಿರಿಯ ಪ್ರಾಥಮಿಕ ಹಂತದವರೆಗಾದರೂ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವಂತಾಗಬೇಕು” ಎಂದು ರಾಯಬಾಗದ ಎಸ್.ಪಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ವೈ.ಬಿ. ಹಿಮ್ಮಡಿ ಅಭಿಪ್ರಾಯ ಪಟ್ಟರು.
ಇಲ್ಲಿನ ಕಣಬರಗಿಯ ಸಮತಾ ಶಾಲೆ ವತಿಯಿಂದ ರವಿವಾರ ಆಯೋಜಿಸಿದ ‘ಅಂತರಾಷ್ಟಿçÃಯ ಮಾತೃಭಾಷಾ ದಿನಾಚರಣೆ ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಶಿಕ್ಷಕ ವಿಶ್ವನಾಥ ಕವಲೆ ಅವರು ‘ಕನ್ನಡ-ಕನ್ನಡಿಗ-ಕರ್ನಾಟಕ’ ಕುರಿತು ಉಪನ್ಯಾಸ ನೀಡಿದರು. ಶಾಲೆಯ ವಿವಿಧ ಭಾಷಾ ಶಿಕ್ಷಕರು ‘ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ’ ಭಾಷೆಗಳ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ, ರೇಣುಕಾ ಮಜಲಟ್ಟಿ, ಜಯಶ್ರೀ ನಾಯಕ, ಅಪರ್ಣಾ ಗೌಡರ, ಶ್ರೀದೇವಿ ಕುಂಬಾರ, ಶಾಂತಾ ಮೋದಿ, ಬಸಪ್ಪಾ ಕಾಂಬಳೆ, ಭುವನೇಶ್ವರಿ ನಂದಿಹಳ್ಳಿ, ಸವಿತಾ ಪೂಜೇರಿ, ಶಾಲೆಯ ಮಕ್ಕಳು ಹಾಗೂ ಪಾಲಕರು ಹಾಗೂ ಇತರರು ಇದ್ದರು. ಎಸ್.ಕೆ. ಪಟ್ಟಣಶೆಟಿ ಸ್ವಾಗತಿಸಿದರು, ಸುನೀತಾ ಸೋನಗೋಜೆ ನಿರೂಪಿಸಿದರು. ಮಲಿಕಜಾನ ಗದಗಿನ ವಂದಿಸಿದರು.

loading...