ಕೊರೊನಾ ಪೀಡತ ಚೀನಾದ ವುಹಾನ್ ಗೆ ಭಾರತದಿಂದ ಔಷಧ

0
3

ನವದೆಹಲಿ- ಔಷಧ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತದ ವಿಮಾನ ಚೀನಾದ ಕೊರೊನಾ ಸೋಂಕು ಪೀಡಿತ ವುಹಾನ್ ಗೆ ತಲುಪಲಿದೆ. ಸಾಮಗ್ರಿ ನೀಡಿ ಹಿಂದಿರುಗುವಾಗ ಇನ್ನಷ್ಟು ಭಾರತೀಯರನ್ನು ಕರೆತರಲಿದೆ.
ಬುಧವಾರ ವಿಮಾನ ಚೀನಾಗೆ ಹಾರಾಟ ನಡೆಸಲಿದ್ದು ಶುಕ್ರವಾರದಂದು ಭಾರತೀಯರು ಆ ವಿಮಾನದಲ್ಲಿ ವಾಪಸ್ಸಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇದಕ್ಕೂ ಮುನ್ನ ಈ ವಿಮಾನ ಫೆ 20 ರಂದು ತೆರಳಲಿದೆ ಎಂದು ಹೇಳಲಾಗಿತ್ತು, ಆದರೆ ಚೀನಾದಿಂದ ಅನುಮತಿಗೆ ಕಾಯಲಾಗಿತ್ತು. ಇದೀಗ ಈ ವಿಮಾನ ಫೆ 26 ರಂದು ಚೀನಾ ಗೆ ಹಾರಾಟ ನಡೆಸಲಿದೆ.
ಗ್ಲೌಸ್, ಸರ್ಜಿಕಲ್ ಮಾಸ್ಕ್, ಫೀಡಿಂಗ್ ಪಂಪ್, ಡಿಫೈಬ್ರಿಲೇಟರ್ಸ್ ಮೊದಲಾದವುಗಳು ಅಗತ್ಯವಿದೆ ಎಂದು ಚೀನಾ ನೀಡಿದ ಮಾಹಿತಿ ಆಧರಿಸಿ ಅವುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

loading...