ಕೊರೋನೊ ಬಗ್ಗೆ ಆತಂಕ ಬೇಡ, ಎಚ್ಚರಿಕೆ ವಹಿಸಿ: ಸಚಿವ ಸಿ.ಟಿ.ರವಿ

0
3

ಬೆಳಗಾವಿ
ರಾಜ್ಯದಲ್ಲಿ ಬಂದಿರುವ ಕರೋನೊ ವೈರಸ್ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಸಂಶಯವಿತ್ತು. ಒಂದು ನೆಗಟಿವ್ ಬಂದಿದೆ. ಇನೊಬ್ಬರ ರಕ್ತ ತಪಾಸಣೆಯ ವರದಿ ಬರಬೇಕಿದೆ ಎಂದು ಪ್ರವಾಸೋಧ್ಯಮ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಭಾನುವಾರ ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಬಂದಿರುವ ಕರೋನೊ ವೈರಸ್ ಬಗ್ಗೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತು. ಅದರಲ್ಲಿ ಒಬ್ಬರಿಗೆ ಕೊರೋನೊ ವೈರಸ್ ಇಲ್ಲ ಎಂದು ದೃಢಪಟ್ಟಿದೆ. ಇನ್ನೊಬ್ಬರ ರಕ್ತ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಗಿಸಿ ಕೊಡಲಾಗಿದೆ. ವರದಿ ಬಂದಿಲ್ಲ. ಇವರಲ್ಲಿ ಒಬ್ಬರು ಸಿಂಗಾಪೂರಕ್ಕೆ ಹೋಗಿ ಬಂದಿದ್ದರು. ಇನ್ನೊಬ್ಬರು ಬೈರಿಂಗ್ ಹೋಗಿ ಬಂದಿದ್ದಾರೆ. ಇಬ್ಬರದ್ದೂ ನೆಗೆಟಿವ್ ವರದಿ ಬರಲಿದೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊರೋನೊ ವೈರಸ್ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸ್ವಲ್ಪ ಎಚ್ಚರಿಕೆ ವಹಿಸಬೇಕು. ಈ ಮಾರಕ ವೈರಸ್‌ನಿಂದ ಪ್ರವಾಸೋಧ್ಯಮ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಆರ್ಥಿಕ ನಷ್ಟವಾಗಿದೆ. ಈ ವೈರಸ್ ನಿಂದ ಗ್ಲೋಬಲ್ ನಲ್ಲಿ ಎಫೆಕ್ಟ್ ಆಗಿದೆ ಎಂದರು.
ಕೊರೋನೊ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತ್ಯೇಕ ಬಜೆಟ್ ಮಂಡಿಸುವ ವಿಚಾರವಾಗಿ ಉತ್ತರಿಸಿದ ಸಚಿವರು, ಸಿದ್ದರಾಮಯ್ಯನವರು ಅನುಭವಿಗಳಿದ್ದಾರೆ. ಸದನ ನಡೆಯುತ್ತಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರ ಕೊರೋನೊ ಬಗ್ಗೆ ಕ್ರಮ ಕೈಗೊಂಡಿದೆ. ಅಗತ್ಯ ಬಿದ್ದರೆ ಸಿಎಂ ಯಡಿಯೂರಪ್ಪ ಕ್ರಮ ಜರುಗಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇರುವುದಾಗಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸಿ.ಟಿ.ರವಿ ತಮ್ಮದೆಯಾದ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ತಿಮ್ಮಾಪುರ ಅವರಿಗೆ ಪರೀಕ್ಷೆಗೆ ಒಳಪಡಿಸಬೇಕಿದೆ. ಇತ್ತೀಚೆಗೆ ಅವರು ಇದ್ದಕ್ಕಿದ್ದಂತೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರು ಮತ್ತು ಅವರ ಕುಟುಂಬದ ಹಿತ ದೃಷ್ಠಿಯಿಂದ ಅವರನ್ನು ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದು ತೀಕ್ಷಣವಾಗಿ ಉತ್ತರಿಸಿದರು.

loading...