ಸೂರ್ಯಾಸ್ತ ಅಗ್ನಿಹೋತ್ರದಿಂದ ಸಕಲವೂ ನಿನ್ನದೇ: ವಿನಾಯಕ

0
10

ಬೆಳಗಾವಿ
ಇಲ್ಲಿನ ಅನಗೋಳ ಚಿದಂಬರೇಶ್ವ ನಗರದ ಚಿದಂಬರೇಶ್ವರ ದೇವಸ್ಥಾನ ಆವರಣದಲ್ಲಿ ವಿನಾಯಕ ಲೋಕುರ್‌ರವರ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ ಸೂರ್ಯಾಸ್ತ ಅಗ್ನಿಹೋತ್ರ ಕಾರ್ಯಕ್ರಮಕ್ಕೆ ನೂರಾರೂ ಭಕ್ತಾಧಿಗಳ ಸಮ್ಮುಖದಲ್ಲಿ ಅಗ್ನಿಸ್ಪರ್ಶಿಸಲಾಯಿತು.
ಅಗ್ನಿಹೋತ್ರವನ್ನು ಸೂರ್ಯಸ್ತ ಸಮಯದಲ್ಲಿ ನಿತ್ಯವೂ ನೇರವೆಸುವದರಿಂದ ಮನುಷ್ಯನ ಸಾಧನೆಗೆ ಹಾಗೂ ನಿಶ್ಚಲ, ಮನಶಾಂತಿ, ಜ್ಞಾನವೃದ್ಧಿ, ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಬದಲಾವಣೆ ಕಾಣಬಹುದು, ಅಗ್ನಿಹೋತ್ರದಿಂದ ಸಕಲವನ್ನು ಪಡೆದುಕೊಳ್ಳಬಹುದು ಎಂದು ವಿನಾಯಕ ಲೋಕುರ್ ವಿಶ್ವಾಸ ವ್ಯಕ್ತಿಪಡಿಸಿದರು.
ವಿವಿಧ ೮೫ ರಾಷ್ಟ್ರಗಳಲ್ಲಿ ಈ ಅಗ್ನಿಹೋತ್ರ ಮಾಡಲಾಗುತ್ತಿದೆ, ದೇವರನಾಡದ ಭಾರತದಲ್ಲಿ ಇದನ್ನು ಮಾಡಬೇಕೆಂಬ ಭಾವನೆ ಹೊಂದಲಾಗಿದೆ.
ಮುಕೋಟಿ ದೇವರೆಂದು ನಿತ್ಯವೂ ಪೂಜಿಸುವ ಶಿವನ ನಂದಿಯ ಮೂತ್ರ, ಸಗಣಿ ಪಡೆದುಕೊಂಡು ಅದಕ್ಕೆ ತುಪ್ಪವನ್ನು ಬೇರಿಸಿ ನಿತ್ಯವೂ ಅಗ್ನಿಹೋತ್ರ ನೇರವೆರಿಸುವಂದರಿಂದ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯ ಎಂದರು.
ಆಧುನಿಕ ತಂತ್ರಜ್ಞಾನಕ್ಕೆ ಅಂಟಿಕೊAಡ ನಾಗರಿಕರು ದೈವಲಿಲೇ, ವೇದಾಂತ ದೇವರ ಮೇಲಿನ ಅಪಾರನಂಬಿಕೆಯನ್ನು ನಿರ್ಲಕ್ಷಿö್ಯಸಿ ಪರಿಸರ ನಾಶಕ್ಕೆ ಕಾಣರಾಗುತ್ತಿದ್ದಾರೆ.
ನೈಸರ್ಗಿಕ ಬದುಕಿಗೆ ಹಾಗೂ ಗುಣಮಟ್ಟದ ಆಹಾರ, ಗಾಳಿ, ನೀರು ನೇವಿಸಲು ಹೊಮ, ಹವನ, ಅಗ್ನಿಹೋತ್ರಗಳನ್ನು ಮಾಡಬೇಕು. ಲೋಕಕಲ್ಯಾಣಕ್ಕಾಗಿ ಇವುಗಳು ಸೂಕ್ತ ಎಂದರು ಪ್ರತಿಪಾದಿಸಿದರು.
ಅಗ್ನಿಹೋತ್ರದಿಂದ ಏಳಿಗೆ ಕಂಡವರು==
ಜೀವನ ಬೇಸರ, ಗದ್ದೆಗಳಲ್ಲಿ ಬೆಳೆದ ಬೆಳೆಗಳು ನಾಶವಾಗುವ ಸಂದರ್ಭದಲ್ಲಿ ಅಗ್ನಿಹೋತ್ರ ನೇರವೆರಿಸಲು ಏಳಿಗೆ ಕಂಡ ವ್ಯಕ್ತಿಗಳು ಪ್ರೇರಣೆ ನೀಡಿದರು.
ಎರಡು ವರ್ಷಗಳಿಂದ ಈ ಅಗ್ನಿಹೋತ್ರವನ್ನು ಸೂರ್ಯಾಸ್ತ ಸಮಯದಲ್ಲಿ ಮಾಡಿ, ಅಗ್ನೀಸ್ಪರ್ಶದಿಂದ ಬಂದತAಹ ಗೋಪ್ರಸಾದವನ್ನು ಗದ್ದೆಗಳಿಗೆ ಸಿಂಪಡಿಸಿದೆ, ಇದರಿಂದ ಬೆಳೆಗಳು ಸಮೃದ್ಧ ಕಂಡವು ತೇಜಸ್ವಿ ನಾಯಕ ಅನಿಸಿಕೆ ಹಂಚಿಕೊಂಡರು.
ಮನಸ್ಸಿನ ಅಶಾಂತಿ ಸ್ಥಿತಿ, ಒಂಟಿಯಾಗಿರುವಿಕೆ, ಮನೆಯಲ್ಲಿ ಕಾಡಾಟ, ಮಕ್ಕಳ ಶಿಕ್ಷಣದಲ್ಲಿ ಮಂದಗತ್ತಿಯನ್ನು ಕಂಡ ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿಕೊಂಡಿತ್ತು ಈ ಅಗ್ನಿಹೋತ್ರ ಮಾಡುವದರಿಂದ ಸಕಲವನ್ನು ಪಡೆದುಕೊಳ್ಳಬಹುದು ಎಂದು ಅಪಾರ ನಂಬಿಕೆ ಬಂದಿದೆ ಎಂದು ಅನುಪಾ ರಜಪೂತ ಅನಿಸಿಕೆ ಹಂಚಿಕೊಂಡರು.

loading...