ದಕ್ಷಿಣ ಕೊರಿಯಾದಲ್ಲಿ 74 ಹೊಸ ಕೊವಿದ್‍-19 ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 8,236ಕ್ಕೆ ಏರಿಕೆ

0
5
ಸಿಯೋಲ್:- ದಕ್ಷಿಣ ಕೊರಿಯಾದಲ್ಲಿ ಸೋಮವಾರ ಮಧ್ಯರಾತ್ರಿಯ ವೇಳೆಗೆ 74 ಹೊಸ ಕೊವಿದ್‍-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 8,236ಕ್ಕೆ ಏರಿದೆ.
ಮಾರಕ ಸೋಂಕಿನಿಂದ ಒಂದು ಸಾವು ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 76 ಕ್ಕೆ ಏರಿದೆ.

ಸಂಪೂರ್ಣ ಚೇತರಿಸಿಕೊಂಡ ನಂತರ ಒಟ್ಟು 303 ರೋಗಿಗಳು ಸಂಪರ್ಕತಡೆ ಕೇಂದ್ರಗಳಿಂದ ನಿರ್ಗಮಿಸಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,137 ಕ್ಕೆ ಏರಿದೆ.
ಮಧ್ಯೆ, ಕೊರಿಯಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಮಾರ್ಚ್ 10 ರಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ದಿನಕ್ಕೆ ಒಂದು ಬಾರಿ ಮಾಹಿತಿ ನವೀಕರಿಸಲು ನಿರ್ಧರಿಸಿದೆ.
ವೈರಸ್ ಸೋಂಕು ಕಳೆದ ಕೆಲ ವಾರಗಳಿಂದ ತೀವ್ರವಾಗಿ ಹಬ್ಬುತ್ತಿದ್ದು ಫೆ 19 ರಿಂದ ಮಾರ್ಚ್ 15 ರವರೆಗೆ 8,205 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು  ‘ಕೆಂಪು’ ಮಟ್ಟಕ್ಕೆ ಏರಿಸಲಾಗಿದೆ.
ಸಿಯೋಲ್‌ನ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿರುವ ಡೇಗು ಮತ್ತು ಅದರ ಸುತ್ತಮುತ್ತಲಿನ ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ ಕ್ರಮವಾಗಿ 6,066 ಮತ್ತು 1,164 ಕ್ಕೆ ಏರಿದೆ. ಇದು ದೇಶದಲ್ಲಿ ಒಟ್ಟು ಪ್ರಕರಣಗಳ ಪೈಕಿ ಶೇ 90 ರಷ್ಟಿದೆ.
ಸಿಯೋಲ್ ಮತ್ತು ಅದರ ಪಕ್ಕದ ಜಿಯೊಂಗ್ಗಿ ಪ್ರಾಂತ್ಯದಲ್ಲಿ ತಲಾ 253 ಮತ್ತು 231 ಪ್ರಕರಣಗಳು ದೃಢಪಟ್ಟಿವೆ.
2.5 ದಶಲಕ್ಷ ಜನಸಂಖ್ಯೆ ಹೊಂದಿರುವ ಡೇಗು ನಗರದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದಿದ್ದರಿಂದ ಇದು ವೈರಾಣು ಹರಡುವಿಕೆಯ ಕೇಂದ್ರಬಿಂದುವಾಗಿದೆ. ಡೇಗು ನಗರವನ್ನು ಸರ್ಕಾರವು ‘ವಿಶೇಷ ವಿಪತ್ತು ವಲಯ’ ಎಂದು ಘೋಷಿಸಿದೆ.
ಜ 3 ರಿಂದ, ದೇಶದಲ್ಲಿ 2,74,000 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ  2,51,297 ಜನರಲ್ಲಿ ಸೋಂಕು ಕಂಡು ಬಂದಿಲ್ಲ. ಇನ್ನೂ 14,971 ಜನರನ್ನು ಪರೀಕ್ಷಿಸಲಾಗುತ್ತಿದೆ.

loading...