ಕೋವಿಡ್-19; ಇರಾನ್ ನ ಎರಡನೇ ಸುತ್ತಿನ ಸಂಸದೀಯ ಚುನಾವಣೆ ಮುಂದೂಡಿಕೆ

0
9
ತೆಹ್ರಾನ್:- ವಿಶ್ವಾದ್ಯಂತ  ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೋನಾ ವೈರಾಣು ಸೋಂಕಿನ ವಿರುದ್ಧ ಹೋರಾಡುವ ಸಲುವಾಗಿ ಇರಾನ್ ದೇಶದಲ್ಲಿ ಎರಡನೇ ಸುತ್ತಿನ ಸಂಸದೀಯ ಚುನಾವಣೆಯನ್ನು ಮುಂದೂಡಲಾಗಿದೆ.
ನಿಗದಿಯಂತತೆ ಏ. 17ರಂದು ನಡೆಯಬೇಕಿದ್ದ ಚುನಾವಣೆಯನ್ನು ಸೆ.11ಕ್ಕೆ ಮುಂದೂಡಲಾಗಿದೆ ಎಂದು ಸಂಸತ್ ರಕ್ಷಣಾ ಪರಿಷತ್ ನ ವಕ್ತಾರ ಅಬ್ಬಾಸಲಿ ಕಬ್ಕೊಡಾಯಿ ಭಾನುವಾರ ಪ್ರಕಟಿಸಿದ್ದಾರೆ.
ಇಲ್ಲಿ ಫೆ. 21ರಂದು ಮೊದಲ ಹಂತದ ಸಂಸದೀಯ ಚುನಾವಣೆ ನಡೆದಿತ್ತು. ಇದರಲ್ಲಿ 24.512 ಮಿಲಿಯನ್ ಅಂದರೆ ಶೇ. 42.57ರಷ್ಟು ಜನರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಇರಾನ್ ನಲ್ಲಿ ಇಲ್ಲಿಯವರೆಗೆ 13,938 ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದು, 724 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ
loading...