ಒಂದಾದ್ರಾ ಸಾಹುಕಾರ್ ಬ್ರದರ್ಸ್! : ಕುತೂಹಲ ಮೂಡಿಸಿದ ಕತ್ತಿ- ಜಾರಕಿಹೊಳಿ ಭೇಟಿ

0
148

ಒಂದಾದ್ರಾ ಸಾಹುಕಾರ್ ಬ್ರದರ್ಸ್! : ಕುತೂಹಲ ಮೂಡಿಸಿದ ಕತ್ತಿ- ಜಾರಕಿಹೊಳಿ ಭೇಟಿ


ಆನಂದ ಭಮ್ಮನ್ನವರ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತಮ್ಮ ರಾಜಕೀಯ ನಡೆಯ ಮೂಲಕ ರಾಜ್ಯದ ಜನರ ಗಮನ ಸೆಳೆದಿರುವ ಗಡಿ ಜಿಲ್ಲೆಯ ಸಾಹುಕಾರೆಂದೆ ಕರೆಸಿಕೊಳ್ಳುವ ಕತ್ತಿ ಹಾಗೂ ಜಾರಕಿಹೊಳಿ ಸಹೋದರರು ಇತ್ತೀಚಿಗೆ ಒಂದಾಗಿ ರಾಜಕೀಯ ತಂತ್ರಗಾರಿಗೆ ಹೆಣೆಯುತ್ತಿರುವುದಕ್ಕೆ ರವಿವಾರದ ಇಬ್ಬರ ನಾಯಕರ ಭೇಟಿ ಪುಷ್ಠಿ ನೀಡಿದೆ .
ಹುಕ್ಕೇರಿ ತಾಲೂಕಿನ ಬಾಗೇವಾಡಿಯಲ್ಲಿರುವ ಕತ್ತಿ ನಿವಾಸಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೇಟಿಯಾಗಿ
ಮಾಜಿ ಸಚಿವ ಉಮೇಶ ಕತ್ತಿ ಹುಟ್ಟುಹಬ್ಬದ ನಿಮಿತ್ತ ಶುಭ ಕೋರಿರುವುದು ಜಿಲ್ಲಾ ರಾಜಕಾರಣದಲ್ಲಿ
ತೀವ್ರ ಚರ್ಚೆಗೆ ಗ್ರಾಸವಾಗಿದೆ .

ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಉಮೇಶ ಕತ್ತಿ ಸರಕಾರಿ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಲೆ ತಮ್ಮ ಆಕ್ರೋಶ ಹೊರಹಾಕುತ್ತಿದ್ದು , ಕತ್ತಿ ಜಾರಕಿಹೊಳಿ ಭೇಟಿ ಭವಿಷ್ಯದ ರಾಜಕೀಯ ಬದಲಾವಣೆಗಳ ಮುನ್ಸೂಚನೆಯಾಗಬಹುದೇ ಎಂದು ಅಂದಾಜಿಸಲಾಗಿದೆ .

ಅಲ್ಲದೇ ಬರುವ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣಾಯಲ್ಲಿ ಈ ಇಬ್ಬರೂ ನಾಯಕರು ಒಂದಾಗಿ ಚುನಾವಣಾ ಎದುರಿಸುವುದಾಗಿ ಈಗಾಗಲೇ ಸಚಿವ ರಮೇಶ ಜಾರಕಿಹೊಳಿ ಬಹಿರಂಗ ಪಡೆಸಿದ್ದು,ಇದರಿಂದಾಗಿ ಮಾಜಿ ಸಂಸದ ರಮೇಶ ಕತ್ತಿ ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ಅದ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗಿದೆ .

ಮುಂಬರುವ ದಿನಗಳಲ್ಲಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ದೊರೆಯುವ ಬಗ್ಗೆಯು ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟ ಪಡೆದಿದ್ದರು .ಇದೀಗ ರಮೇಶ ಕತ್ತಿ ಅವರಿಗೆ ರಾಜ್ಯ ಸಭೆ ಸ್ಥಾನ ಗಿಟ್ಟಿಸಿಕೊಳ್ಳಲು ಕತ್ತಿ ಹಾಗೂ ಜಾರಕಿಹೊಳಿ ಸಹೋದರರು ಒಟ್ಟಾಗಿ ತಂತ್ರ ರೂಪಿಸುತ್ತಿದ್ದಾರೆ ಎಂಬ ಅನುಮಾನ ರಾಜಕೀಯ ಪಡಸಾಲೆಯಲ್ಲಿ ಹರದಾಡತೋಡಗಿದೆ .

ಒಟ್ಟಿನಲ್ಲಿ ಜಾರಕಿಹೊಳಿ ಕತ್ತಿ ಭೇಟಿ ಒಗ್ಗಟು ಪ್ರದರ್ಶಿಸುತ್ತಾ ಎಂಬುವುದನ್ನ ಕಾದು ನೋಡಬೇಕಿದೆ .

loading...