ಕೊರೊನಾ ವೈರಸ್;   ಇರಾನ್ ನಿಂದ  ೫೩ ಭಾರತೀಯರ ೨ನೇ ತಂಡ  ಜೈಸಲ್ಮೇರ್   ಪ್ರತ್ಯೇಕ ನಿಗಾ ಘಟಕಕ್ಕೆ ಸ್ಥಳಾಂತರ

0
26


ಜೈಸಲ್ಮೇರ್ (ರಾಜಸ್ಥಾನ),:-  ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು  ತ್ವರಿತವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ  ಇರಾನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ  ೫೩ ಮಂದಿ ಭಾರತೀಯರ ಎರಡನೇ ತಂಡವನ್ನು ಸೋಮವಾರ  ತಾಯ್ನಾಡಿಗೆ  ಸ್ಥಳಾಂತರಿಸಲಾಗಿದ್ದು,  ರಾಜಸ್ಥಾನದ  ಜೈಸಲ್ಮೇರ್ ನಲ್ಲಿರುವ ಇಂಡಿಯನ್ ಆರ್ಮಿ ವೆಲ್ ನೆಸ್  ಸೆಂಟರ್ ನಲ್ಲಿ ಸ್ಥಾಪಿಸಿರುವ  ಪ್ರತ್ಯೇಕ ನಿಗಾ ಘಟಕದಲ್ಲಿ  ದಾಖಲು ಮಾಡಲಾಗಿದೆ.
ಭಾನುವಾರ  ಇರಾನ್ ನಲ್ಲಿದ್ದ  ೨೩೦ಕ್ಕೂ ಅಧಿಕ ಭಾರತೀಯರನ್ನು  ಭಾರತಕ್ಕೆ ಸ್ಥಳಾಂತರಿಸಿ, ವೆಲ್‌ನೆಸ್  ಕೇಂದ್ರದಲ್ಲಿ ಸ್ಥಾಪಿಸಲಿರುವ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ನಿಯಮಾವಳಿಯಂತೆ   ವಿಮಾನ ನಲ್ದಾಣದಲ್ಲಿ  ಈ ಎಲ್ಲ ವ್ಯಕ್ತಿಗಳ  ಪ್ರಾಥಮಿಕ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ನಂತರ ಜೈಸಲ್ಮೇರ್ ನಲ್ಲಿ  ಸ್ಥಾಪಿಸಲಾಗಿರುವ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗಿದ್ದು,  ವೃತ್ತಿಪರ  ವೈದ್ಯರ  ಉಸ್ತುವಾರಿಯಲ್ಲಿ  ಇವರನ್ನು ೧೪ ದಿನಗಳ ಕಾಲ ನಿಗಾವಹಿಸಲಾಗುವುದು  ಎಂದು  ಭಾರತೀಯ ಸೇನಾ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
ಕೋವಿಡ್ -೧೯ ಅಥವಾ ಕೊರೊನಾ ವೈರಸ್  ಸಾಂಕ್ರಾಮಿಕ ರೋಗ  ಎಂದು ವಿಶ್ವ ಆರೋಗ್ಯ ಸಂಸ್ಥೆ  ಘೋಷಿಸಿದ್ದು,   ತೀವ್ರ ಸೋಂಕು ಪೀಡಿತ ದೇಶಗಳಾದ  ಇಟಲಿ, ಇರಾನ್, ಮತ್ತಿತರ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು  ಭಾರತ ಸರ್ಕಾರ ತಾಯ್ನಾಡಿಗೆ ಸ್ಥಳಾಂತರಿಸುತ್ತಿದೆ.
ಕೊರೋನವೈರಸ್ ಸಾಂಕ್ರಾಮಿಕವು   ತನ್ನ   ಆರೋಗ್ಯ ಸೌಲಭ್ಯಗಳನ್ನು   ಹಾಳು ಮಾಡಬಹುದು  ಎಂದು ಇರಾನ್ ಎಚ್ಚರಿಸಿದ್ದು,  ಆ ದೇಶದಲ್ಲಿ  ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ೭೨೪ಕ್ಕೆ ಏರಿಕೆಯಾಗಿದೆ.
ಇರಾನ್ ನಲ್ಲಿ  ಸೋಂಕು  ತಗುಲಿದವರ  ಸಂಖ್ಯೆ ೧೪ ಸಾವಿರಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರಲ್ಲಿ ಶೇ ೧೫ರಷ್ಟು ಮಂದಿ  ನಲವತ್ತರ ವಯೋಮಾನದವರು ಎಂದು ಇರಾನ್ ಹೇಳಿದೆ

loading...