ಕೊರೋನಾ ಭೀತಿ; ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

0
4

ಜೆರುಸಲೆಮ್-  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಹಾಮಾರಿ ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯದ ಸಾರ್ವಜನಿಕ ವಲಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಹೀಗಾಗಿ, ಹೆಚ್ಚಿನ ಸರ್ಕಾರಿ ನೌಕರರಿಗೆ ಬುಧವಾರದಿಂದ ಏಪ್ರಿಲ್ ಮಧ್ಯದವರೆಗೆ ರಜೆ ನೀಡಲಾಗಿದೆ.
ಇದಲ್ಲದೆ, ಖಾಸಗಿ ವಲಯದಲ್ಲಿ ಹತ್ತು ಅಥವಾ ಹೆಚ್ಚಿನ ಉದ್ಯೋಗಿಗಳು ಕೆಲಸದ ಸ್ಥಳಗಳಲ್ಲಿ ಚಟುವಟಿಕೆಯನ್ನು ಶೇ.70 ರಷ್ಟು ಕಡಿಮೆಗೊಳಿಸಿದ್ದಾರೆ.
ಹೀಗಾಗಿ, ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಕೇವಲ 30 ಪ್ರತಿಶತದಷ್ಟು ಉದ್ಯೋಗಿಗಳಿಗೆ ಮಾತ್ರ ಕೆಲಸಕ್ಕೆ ಹೋಗಲು ಅವಕಾಶವಿದೆ.
ಸೂಪರ್ ಮಾರ್ಕೆಟ್ ಗಳು, ಬ್ಯಾಂಕುಗಳು ಮತ್ತು ಕೆಲ ಅಗತ್ಯ ಸೇವೆಗಳು ಮಾತ್ರ  ಇಸ್ರೇಲ್‌ನಲ್ಲಿ ಪೂರ್ಣ ಸ್ವರೂಪದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸೂಚಿಸಲಾಗಿದೆ.

loading...