ಫ್ರಾನ್ಸ್‌ನಲ್ಲಿ ಕೊರೋನ ಸೋಂಕಿತರ ಸಂಖ್ಯೆ 6,600ಕ್ಕೆ ಏರಿಕೆ

0
2

ಪ್ಯಾರಿಸ್-  ಕಳೆದ 24 ಗಂಟೆಗಳಲ್ಲಿ ಫ್ರಾನ್ಸ್‌ನಲ್ಲಿ ಕೋವಿದ್-19 ವೈರಸ್ ಸೋಂಕಿತರ ಸಂಖ್ಯೆ 1,200 ಕ್ಕಿಂತ ಹೆಚ್ಚಾಗಿದ್ದು, ಒಟ್ಟು 6,633 ಜನರಿಗೆ ತಲುಪಿದೆ, ಈಗಾಗಲೇ 148 ಜನರು ಮಾರಣಾಂತಿಕ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 11 ರಂದು, ವಿಶ್ವ ಆರೋಗ್ಯ ಸಂಸ್ಥೆಯು ಕೊರೋನವೈರಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಬೆನ್ನಲ್ಲೇ, 148 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 169,000ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಹೆಚ್ಚಿನ ಕರೋನವೈರಸ್ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಆದರೆ ಇದುವರೆಗೆ ಒಟ್ಟು 6,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ

loading...