ಟರ್ಕಿ:  29 ಹೊಸ ಕರೋನ ಸೋಂಕು  ಪ್ರಕರಣ ದೃಡ

0
41

ಅಂಕಾರಾ- ಟರ್ಕಿಯಲ್ಲಿ ಹೊಸದಾಗಿ ಕೋವಿಡ್ ಸೊಂಕಿನ 29 ಪ್ರಕರಣ  ಪತ್ತೆಯಾಗಿದೆ ಎಂದು ಟರ್ಕಿಶ್ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಸೋಮವಾರ ಹೇಳಿದ್ದಾರೆ.
29 ಹೊಸ ಪ್ರಕರಣಗಳೆಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಅಮೆರಿಕ , ಯುರೋಪ್ ಅಥವಾ ಇತರ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಪರ್ಕದಿಂದ,  ಮೂರು ಪ್ರಕರಣಗಳು ಸೌದಿ ಅರೇಬಿಯಾದ ಉಮ್ರಾ ದಿಂದ ಬಂದಿದೆ ಎಂದು ಅವರು ಹೇಳಿದರು .
ಕಳೆದ ವಾರದಲ್ಲಿ ಸೌದಿ ಅರೇಬಿಯಾದಿಂದ ಮರಳಿದ ಟರ್ಕಿಯ ಪ್ರಜೆಯಲ್ಲಿ ಕೋವಿಡ್ ಸೋಂಕು ಇರುವುದು  ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿದೆ.
ಈ ನಡುವೆ ಒಟ್ಟು ದೃಡಪಡಿಸಿದ  ಪ್ರಕರಣಗಳ ಒಟ್ಟು ಸಂಖ್ಯೆ 47 ಕ್ಕೆ ಏರಿಕೆಯಾಗಿದೆ ಎಂದೂ  ಸಚಿವರು ಶನಿವಾರ ತಿಳಿಸಿದ್ದಾರೆ.

loading...