ಕೊರೊನವೈರಸ್‍: ತ್ರಿಪುರಾದಲ್ಲಿ ನಿಷೇಧಾಜ್ಞೆ ರದ್ದುಪಡಿಸುವಂತೆ ಪ್ರತಿಪಕ್ಷಗಳ ಒತ್ತಾಯ

0
2

ಅಗರ್ತಲಾ-ಕೊರೊನವೈರಸ್ ಸೋಂಕು ಹರಡುವಿಕೆ ತಡೆಯಲು ಐವರು ಮತ್ತು ಹೆಚ್ಚಿನ ಜನ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್ 144ರಡಿ  ಮಾರ್ಚ್ 16 ರಾತ್ರಿ ತ್ರಿಪುರದಾದ್ಯಂತ ವಿಧಿಸಲಾಗಿರು ನಿಷೇಧಾಜ್ಞೆಯನ್ನು ವಾಪಸ್‍ ಪಡೆಯುವಂತೆ ಪ್ರತಿಪಕ್ಷಗಳುಉ ಒತ್ತಾಯಿಸಿವೆ.
ಸರ್ಕಾರದ ಈ ಕ್ರಮ ಸಾಮಾನ್ಯ ಜನರಲ್ಲಿ ಆತಂಕ ಉಂಟುಮಾಡಿದೆ. ಜನರು ತಮ್ಮ ಹಕ್ಕಿನ ವಿರುದ್ಧ ಹೋರಾಡುವುದನ್ನು ಹತ್ತಿಕ್ಕುವ ಉದ್ದೇಶವೂ ಇದರಲ್ಲಿದೆ ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್  ಆರೋಪಿಸಿದ್ದಾರೆ
ಈ ತಿಂಗಳು ನಿರುದ್ಯೋಗಿಗಳಾಗುವ 10,323 ಹಂಗಾಮಿ ಶಿಕ್ಷಕರು ಸಭೆ ಸೇರುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ನಿಷೇಧಾಜ್ಞೆಯಂತಹ ಕ್ರಮಗಳನ್ನು ಎಲ್ಲೂ ಹೇರಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯಸಲ್ಲಿ ಸರ್ಕಾರಿ ಸಂಸ್ಥೆಗಳು, ಕಚೇರಿಗಳು, ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವಾಗ 144 ಸೆಕ್ಷೆನ್‍ ಹೇಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿರುವ ಅವರು ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಕಾನೂನುಬದ್ಧ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ತಾನು ನೀಡಿದ್ದ ಭರವಸೆಗಳನ್ನು ಎರಡು ವರ್ಷದಲ್ಲಿ ಈಡೇರಿಸಲು ವಿಫಲವಾಗಿ ಇದನ್ನು ಮರೆಯುವಂತಾಗಲು ನಿಷೇಧಾಜ್ಞೆ ಹೇರಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಭಾಲ್‍ ಭೌಮಿಕ್ ಹೇಳಿದ್ದಾರೆ

loading...