ಟರ್ಕಿಯಲ್ಲಿ  ಕೊರೋನಾ ವೈರಸ್ ನಿಂದ ಮೊದಲ ಸಾವು; ಸೋಂಕಿತ ಪ್ರಕರಣಗಳ ಸಂಖ್ಯೆ 98ಕ್ಕೆ ಏರಿಕೆ

0
15

ಅಂಕಾರಾ-  ಟರ್ಕಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 47 ರಿಂದ‌ 98 ಕ್ಕೆ ದ್ವಿಗುಣಗೊಂಡಿದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ  ಮಂಗಳವಾರ ಹೇಳಿದ್ದಾರೆ.
ಟರ್ಕಿಯಲ್ಲಿ ಕರೋನವೈರಸ್ ಸೋಂಕಿತರ ಸಂಖ್ಯೆ  ಒಂದೇ ದಿನದಲ್ಲಿ 18 ರಿಂದ 47 ಕ್ಕೆ ಏರಿಕೆಯಾಗಿತ್ತು ಎಂದು ಸೋಮವಾರ ಕೋಕಾ ತಿಳಿಸಿದ್ದರು.
“ಇಂದು ದೇಶದಲ್ಲಿ ಕೊರೊನಾವೈರಸ್ ನಿಂದ ಮೊದಲ ಸಾವನ್ನು ಸಂಭವಿಸಿದೆ. ಚೀನಾದಲ್ಲಿ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದ 89 ವರ್ಷದ ವ್ಯಕ್ತಿಯು ಸಾವನ್ನಪ್ಪಿದ್ದಾನೆ. ಒಟ್ಟು ಸೋಂಕಿತರ ಸಂಖ್ಯೆ ಈಗ 98ಕ್ಕೇರಿದೆ ಎಂದು ಕೋಕಾ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೊರೊನಾವೈರಸ್ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.  150ಕ್ಕೂ ಹೆಚ್ಚು ದೇಶಗಳಲ್ಲಿ 1,73,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ, ಹೆಚ್ಚಿನವರು ಚೇತರಿಸಿಕೊಂಡಿದ್ದಾರೆ, 7,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೊರೋನವೈರಸ್ ಏಕಾಏಕಿ ಚೀನಾದ ವುಹಾನ್‌ನಲ್ಲಿ 2019 ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕಂಡುಬಂದಿತು.  ಯುರೋಪ್ ನಲ್ಲಿ,ಯೇ ಅತಿ ಹೆಚ್ಚು ಕೊರೋನವೈರಸ್ ಪೀಡಿತ ದೇಶ ಇಟಲಿಯಾಗಿದೆ.

loading...