ಕೊರೊನಾವೈರಸ್; ಸೋಂಕಿತರ ಸಂಖ್ಯೆ ಜಾಗತಿಕವಾಗಿ 1,79,000ಕ್ಕೂ ಹೆಚ್ಚಿದೆ; ಡ್ಬ್ಯೂಎಚ್ಒ ವರದಿ

0
5

ಮಾಸ್ಕೋ- ಕಳೆದ ಒಂದೇ ದಿನದಲ್ಲಿ ಜಾಗತಿಕವಾಗಿ 11,500 ಕ್ಕೂ ಹೆಚ್ಚು ಜನರು ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದು, ಒಟ್ಟು 179,000 ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ವರದಿಯಲ್ಲಿ ದೃಢಪಡಿಸಿದೆ.
ವಿಶ್ವಾದ್ಯಂತ 1,79,112 ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 11,526 ಹೊಸ ಪ್ರಕರಣಗಳು ದಾಖಲಾಗಿವೆ. ಜಾಗತಿಕವಾಗಿ ಸಾವಿನ ಸಂಖ್ಯೆ ಒಂದೇ‌ ದಿನದಲ್ಲಿ 475 ರಷ್ಟು ಏರಿಕೆಯಾಗಿದ್ದು 7,426ಕ್ಕೆ ತಲುಪಿದೆ
ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
ಆಫ್ರಿಕನ್ ಪ್ರದೇಶ, ಪೂರ್ವ ಮೆಡಿಟರೇನಿಯನ್ ಪ್ರದೇಶ, ಅಮೆರಿಕ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ ಪ್ರಸ್ತುತ ಕೊರೋನಾ ಸಾಂಕ್ರಾಮಿಕ ರೋಗವು ಇನ್ನಷ್ಟು ಉಲ್ಬಣಗೊಳ್ಳುತ್ತಿರುವುದರಿಂದ ಈ ಪ್ರದೇಶಗಳಲ್ಲಿ ತುರ್ತು ಸಿದ್ಧತೆ ನಡೆಸಿ ಪ್ರಯಾಣ, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಡ್ಬ್ಯೂ ಎಚ್ಒ ಬದ್ಧವಾಗಿದೆ ಎಂದು ತಿಳಿಸಿದೆ.

loading...