ಇರಾಕ್  ಹೊಸ ಪ್ರಧಾನಿ ನಿಲುವಿಗೆ ಅಮೆರಿಕ ಬೆಂಬಲ:  ಪೊಂಪಿಯೊ

0
6

ವಾಷಿಂಗ್ಟನ್- ಮೂಲ  ವಿಷಯಗಳಲ್ಲಿ ಇರಾಕಿನ  ಹೊಸ ಪ್ರಧಾನಿ ಅವರ  ನೀತಿ, ನಿಲುವು  ಬೆಂಬಲಿಸಲು ಅಮೆರಿಕ ಸರ್ಕಾರ ಸಿದ್ಧ  ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ಹೊಸ ಇರಾಕಿನ ಪ್ರಧಾನಿ ಅಡ್ನಾನ್ ಜುರ್ಫಿ “ಇರಾಕಿನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ, ಮೂಲಭೂತ ಅಗತ್ಯ ಪೂರೈಸುವ,  ಭ್ರಷ್ಟಾಚಾರದಿಂದ ಮುಕ್ತವಾದ,   ಮಾನವ ಹಕ್ಕುಗಳನ್ನು ರಕ್ಷಿಸುವ ಸರ್ಕಾರವನ್ನು ಇರಾಕಿ ಜನತೆ  ಬಯಸುತ್ತಾರೆ  ಎಂದು ಪೊಂಪಿಯೊ ಮಂಗಳವಾರ ಟ್ವಿಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
“ಇರಾಕ್ ಹೊಸದಾಗಿ ಆಯ್ಕೆಯಾದ ಪ್ರಧಾನ ಮಂತ್ರಿ-ಅಡ್ನಾನ್ ಜುರ್ಫಿ ಈ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ  ನೀಡಿದರೆ, ಅವರಿಗೆ ಅಮೆರಿಕ  ಮತ್ತು ಅಂತರರಾಷ್ಟ್ರೀಯ ಬೆಂಬಲವಿದೆ ಎಂದು  ಹೇಳಿದ್ದಾರೆ.
ಭಾನುವಾರ, ಪೊಂಪಿಯೊ ಹೊರಹೋಗುವ ಇರಾಕಿ ಪ್ರಧಾನಿ ಆದಿಲ್ ಅಬ್ದುಲ್-ಮಹ್ದಿ ಅವರೊಂದಿಗೆ  ದೂರವಾಣಿ ಮಾತನಾಡಿ,    ದೇಶದಲ್ಲಿ ಸಮ್ಮಿಶ್ರ ಪಡೆಗಳನ್ನು ರಕ್ಷಿಸಲು ಹೆಚ್ಚಿನ ಕ್ರಮ ತೆಗೆದುಕೊಳ್ಳುವುದಾಗಿ  ಎಂದು ಹೇಳಿದ್ದರು .
ಈ ನಡುವೆ ಮಂಗಳವಾರ ಬಾಗ್ದಾದ್‌ನ ವಸತಿ ಪ್ರದೇಶಕ್ಕೆ ಮತ್ತೊಂದು ಎರಡು ರಾಕೆಟ್‌ಗಳು ಅಪ್ಪಳಿಸಿವೆ ಎಂದು ಪಾಶ್ಚಿಮಾತ್ಯ ಮಾಧ್ಯಮ  ವರದಿ ಮಾಡಿವೆ.

loading...